ಸವಣೂರು: ರಾಷ್ಟ್ರೀಯ ಯುವಸಪ್ತಾಹ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸವಣೂರು, ಎ.4. ಯುವಕ ಮಂಡಲದಿಂದ ವ್ಯಕ್ತಿತ್ವ ವಿಕಸನದ ಜತೆಗೆ ಸರ್ವಾಂಗೀಣ ಬೆಳವಣಿಗೆ ಸಾಧ್ಯ. ಸಮಾಜದಲ್ಲಿ ಸಂಘಟನಾತ್ಮಕ ಶಕ್ತಿಗೆ ಹೆಚ್ಚಿನ ಬಲವಿದೆ. ಈ ನಿಟ್ಟಿನಲ್ಲಿ ಸವಣೂರು ಯುವಕ ಮಂಡಲವು ಹಲವು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಚಿಂತನೆಯೊಂದಿಗೆ ಊರಿನ ಬೆಳವಣಿಗೆಗೆ ಕೊಡುಗೆಯಾಗಿದೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಹೇಳಿದರು.

ಅವರು ರಾಜ್ಯಪ್ರಶಸ್ತಿ ಪುರಸ್ಕøತ ಸವಣೂರು ಯುವಕ ಮಂಡಲದ ವತಿಯಿಂದ ನಡೆಯುವ ರಾಷ್ಟ್ರೀಯ ಯುವಸಪ್ತಾಹ ಹಾಗೂ ಕುಟುಂಬ ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದರು.
ಆಶಯ ಮಾತುಗಳನ್ನಾಡಿದ ಸವಣೂರು ಪ.ಪೂ.ಕಾಲೇಜಿನ ಪ್ರಾಚಾರ್ಯ ಬಿ.ವಿ.ಸೂರ್ಯನಾರಾಯಣ ಅವರು, ಭಾರತೀಯ ಸಂಸ್ಕøತಿಯಲ್ಲಿ ಕುಟುಂಬ ವ್ಯವಸ್ಥೆಗೆ ತನ್ನದೇ ಆದ ಮಹತ್ವವಿದೆ ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳು ಕಾಣ ಸಿಗುವುದು ಅಪರೂಪ. ಕೆಲಸದ ಒತ್ತಡ ಹಾಗೂ ಸಂಕುಚಿತ ಮನೋಭಾವನೆಯಿಂದ ಕುಟುಂಬ ವ್ಯವಸ್ಥೆ ತನ್ನ ಮೂಲಾರ್ಥವನ್ನು ಕಳೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸವಣೂರು ಯುವಕ ಮಂಡಲವು ತನ್ನ ಬಳಗದ ಕುಟುಂಬ ಸಮ್ಮಿಲನ ನಡೆಸುವ ಮೂಲಕ ನವ ಪರಿಕಲ್ಪನೆಗೆ ನಾಂದಿಯಾಗಿದೆ ಎಂದರು.

ಸವಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಉದಯ ರೈ ಮಾದೋಡಿ ಮಾತನಾಡಿ, ಸವಣೂರಿನ ಹೆಸರು ಇಂದು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಇಲ್ಲಿನ ಯುವಕ ಮಂಡಲವೂ ಪ್ರಮುಖ ಕಾರಣ. ಸಮಾಜಕ್ಕೆ ಹಲವು ನಾಯಕರನ್ನು ಯುವಕ ಮಂಡಲ ವೇದಿಕೆ ನೀಡುವ ಮೂಲಕ ಸಮಾಜಕ್ಕೆ ನೀಡಿದೆ ಎಂದರು. ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ, ಯುವಕ ಮಂಡಲದ ಮೂಲಕ ನಾಯಕತ್ವ ಗುಣ ರೂಪುಗೊಳ್ಳಲು ಸಾಧ್ಯ. ಸವಣೂರು ಯುವಕ ಮಂಡಲದಿಂದ ತನಗೆ ಉತ್ತಮವಾದ ವೇದಿಕೆ ದೊರಕಿದೆ. ಇದರಿಂದಾಗಿ ತಾಲೂಕು, ಜಿಲ್ಲಾ , ರಾಜ್ಯ ಯುವಸಂಘಗಳ ಒಕ್ಕೂಟವನ್ನು ಮುನ್ನಡೆಸುವ ಅವಕಾಶ ದೊರಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಮುಂದಾಳು ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ಮಾತನಾಡಿ, ಸಮಾಜದ ಬೆಳವಣಿಗೆಯಲ್ಲಿ ಯುವಜನರ ಪಾತ್ರ ಮಹತ್ವದ್ದು. ಯುವಶಕ್ತಿ ದೇಶದ ಭವಿಷ್ಯ. ಈ ನಿಟ್ಟಿನಲ್ಲಿ ಯುವಜನತೆಗೆ ಸಮಾಜಮುಖಿ ಚಿಂತನೆಗೆ ಯುವಕ ಮಂಡಲಗಳು ಪ್ರೇರಪಣೆಯಾಗುತ್ತದೆ ಎಂದರು.

ನೀತಿ ಸಂಹಿತೆ ವೇದಿಕೆ ಏರದ ಗ್ರಾ.ಪಂ.ಅಧ್ಯಕ್ಷೆ
ಯುವ ಸಪ್ತಾಹದ ಉದ್ಘಾಟನಾ ಸಮಾರಂಭದ ಅಧ್ಯಕ್ತತೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅವರು ವಹಿಸಬೇಕಿತ್ತು, ಆದರೆ ಕಾರ್ಯಕ್ರಮ ಆಗಮಿಸಿದ್ದರೂ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ವೇದಿಕೆ ಏರದೇ ಸಭಾಂಗಣದಲ್ಲೇ ಕುಳಿತರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಆಯೋಜಕರಾದ ಲೇಖಲತಾ ದಿನೇಶ್ ಮೆದು, ಜನನಿ ಮೆದು, ಚಿನ್ಮಯಿ ಮೆದು ಅವರನ್ನು ಯುವಕ ಮಂಡಲದ ವತಿಯಿಂದ ಗೌರವಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷ ಯತೀಶ್ ಕುಮಾರ್ ಕೆ.ಎಂ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಮಾಜಿ ಅಧ್ಯಕ್ಷ ದಿನೇಶ್ ಮೆದು ವಂದಿಸಿದರು. ಸದಸ್ಯ ತಾರಾನಾಥ ಸವಣೂರು ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group