ಆರ್‌ಬಿಐ ರೆಪೋ ದರ ಶೇ. 5.50ಕ್ಕೆ ಇಳಿಕೆ- ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ

(ನ್ಯೂಸ್ ಕಡಬ) newskadaba.com, ಜೂ.06. ಆರ್‌ಬಿಐ ಸತತ ಮೂರನೇ ಬಾರಿ ರೆಪೋ ದರ ಕಡಿತಗೊಳಿಸಿದೆ. ನಿರೀಕ್ಷೆಯಂತೆ ಈ ಬಾರಿ ಬಡ್ಡಿದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಶೇ. 6ರಷ್ಟಿರುವ ಬಡ್ಡಿದರ ಈಗ ಶೇ. 5.50ಕ್ಕೆ ಇಳಿಕೆಯಾಗಿದೆ.

ಎಂಪಿಸಿ ಸಭೆಯ ಈ ನಿರ್ಧಾರವನ್ನು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಆರ್‌ಬಿಐ ತನ್ನ ರಿಪೋ ದರವನ್ನು ಸತತ ಮೂರನೇ ಬಾರಿ ಇಳಿಕೆ ಮಾಡಿದಂತಾಗಿದೆ. ಈ ವರ್ಷದ ಆರಂಭದಲ್ಲಿ ರಿಪೋ ದರ ಶೇ. 6.50ರಷ್ಟಿತ್ತು. ಆರು ತಿಂಗಳ ಅವಧಿಯಲ್ಲಿ ಶೇ. 1ರಷ್ಟು ದರ ಇಳಿದಂತಾಗಿದೆ. ಈ ಹೊಸ ದರವು ತಕ್ಷಣದಿಂದಲೇ ಜಾರಿಗೆ ಬರಲಿದೆ.

error: Content is protected !!
Scroll to Top