(ನ್ಯೂಸ್ ಕಡಬ) newskadaba.com, ಜೂ.05. ಮಂಗಳೂರು: ನಗರದ ಸೆಂಟ್ರಲ್ ಮಾರುಕಟ್ಟೆಯ ಬಳಿ ಅಪರಿಚಿತ ಯುವಕನೋರ್ವನ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.

ಸುಮಾರು 35 ವರ್ಷ ಪ್ರಾಯದ ಈ ಅಪರಿಚಿತ ಯುವಕನ ಕಾಲಿನಲ್ಲಿ ಸಣ್ಣ ಪ್ರಮಾಣದ ಗಾಯ ಕಂಡುಬಂದಿದ್ದು, ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಂದರ್ ಠಾಣೆಯ ಹಾಗೂ ವಿಧಿವಿಜ್ಣಾನ ವಿಭಾಗದ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.