(ನ್ಯೂಸ್ ಕಡಬ) newskadaba.com ಸವಣೂರು,ಎ.3. ಬಿಜೆಪಿ ಬೂತ್ ಸಮಿತಿ-66 ಮೊಗರು ಸವಣೂರು ಇದರ ಬೂತ್ ಸಮಿತಿ ಸಭೆಯು ಮುಂಡತಡ್ಕದಲ್ಲಿ ನಡೆಯಿತು .

ಸಭೆಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣಾ ರೂಪುರೇಷಗಳ ಬಗ್ಗೆ ಹಾಗೂ ಪೇಜ್ ಪ್ರಮುಖ್ ಕಾರ್ಯವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಬಿ.ಕೆ. ಇವರು ಪಂಚಾಯತ್ ಗೆ ಸಂಬಂಧಪಟ್ಟಂತೆ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಕುಂಜಾಡಿ ಉಪಸ್ಥಿತರಿದ್ದರು.ಸಭೆಯಲ್ಲಿ ಅಲಂಕಾರು ಶಕ್ತಿ ಕೇಂದ್ರದ ಸಂಘದ ಪ್ರಮುಖರಾದ ಸುಪ್ರೀತ್ ರೈ ಖಂಡಿಗ,ಹಿರಿಯರಾದ ಶಿವರಾಮ ಗೌಡ ಮೆದು, ಮೊಗರು ಬೂತ್ ಸಮಿತಿ ಅಧ್ಯಕ್ಷರಾದ ತಾರನಾಥ ಕಾಯರ್ಗ, ಕಾರ್ಯದರ್ಶಿ ಜಗದೀಶ್ ಇಡ್ಯಾಡಿ ,ಉಗ್ಗಪ್ಪ ಮುಂಡತ್ತಡ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣೇಶ್ ಶೆಟ್ಟಿ ಕುಂಜಾಡಿ ಇವರು ಪೇಜ್ ಪ್ರಮುಖರಾಗಿ ಆಯ್ಕೆಯಾದ ಪ್ರವೀಣ್ ಪೆರಿಯಡ್ಕ ಹಾಗೂ ಚಂದ್ರಶೇಖರ ಮೆದು ಇವರಿಗೆ ಮತದಾರರ ಪಟ್ಟಿಯ ಪೇಜ್ ನ್ನು ಹಸ್ತಾಂತರ ಮಾಡಿದರು.
