(ನ್ಯೂಸ್ ಕಡಬ) newskadaba.com , ಮೇ.17: ಕಾಸರಗೋಡು: ಹಾರ್ಡ್‌ವೇರ್ ಗೋದಾಮು ಅಗ್ನಿಗಾಹುತಿಯಾದ ಘಟನೆ ಕುಂಬಳೆ ಸಮೀಪದ ಸೀತಾಂಗೋಳಿ ಮುಖಾರಿಗದ್ದೆ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಬದಿಯಡ್ಕ ನಿವಾಸಿ ಹರ್ಷಾದ್ ಎಂಬವರ ಮಾಲಕತ್ವದ ಅರ್ಶ್ ಎಂಟರ್ ಪ್ರೈಸಸ್ ನ ಗೋದಾಮಿನಲ್ಲಿ ಈ ದುರಂತ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ಅನಾಹುತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಯಿಂದ ತಿಳಿದುಬಂದಿದೆ. ಘಟನೆಯಿಂದ ಭಾರೀ ಪ್ರಮಾಣದ ಹಾನಿ ಉಂಟಾಗಿದ್ದು, ಕಾಸರಗೋಡು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.