ದುಷ್ಕೃತ್ಯ ನಡೆಸುವ ಉದ್ದೇಶದಿಂದ ಮನೆಯೊಂದರಲ್ಲಿ ಆಯುಧ ಶೇಖರಣೆ ► ತಲವಾರು ಸಹಿತ ನಾಲ್ವರ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.02. ದುಷ್ಕೃತ್ಯ ನಡೆಸುವ ಸಲುವಾಗಿ ಮನೆಯೊಂದರಲ್ಲಿ ತಲವಾರುಗಳನ್ನು ಬಚ್ಚಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪಣಂಬೂರು ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದ ರೌಡಿ ನಿಗ್ರಹ ದಳದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಮೂರು ತಲವಾರುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರದಂದು ನಡೆದಿದೆ.

ಬಂಧಿತರನ್ನು ಪ್ರಮುಖ ಆರೋಪಿ ಸಂದೀಪ್, ಉಡುಪಿಯ ಆಕಾಶ್, ಫರಂಗಿಪೇಟೆಯ ಚರಣ್‌ರಾಜ್, ಧರ್ಮಸ್ಥಳದ ರಕ್ಷಿತ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಎರಡು ನಾಡ ಪಿಸ್ತೂಲ್ ಹಾಗು 10 ಮದ್ದುಗುಂಡುಗಳನ್ನು ವಶಪಡಿಸಲಾಗಿದೆ. ಇವರು ದುಷ್ಕೃತ್ಯವನ್ನು ನಡೆಸುವ ಉದ್ದೇಶದಿಂದ ಕೃಷ್ಣಾಪುರದ ಮನೆಯೊಂದರಲ್ಲಿ ತಲವಾರುಗಳನ್ನು ಬಚ್ಚಿಟ್ಟಿದ್ದರು. ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವ ಮೂಲಕ ಹೆಚ್ಚಿನ ಅನಾಹುತವೊಂದು ತಪ್ಪಿದಂತಾಗಿದೆ.

Also Read  ಕೊಡಂಗಾಯಿ: ಜೀಪು ಢಿಕ್ಕಿ ► ದ್ವಿಚಕ್ರ ವಾಹನ ಸವಾರ ಮೃತ್ಯು

error: Content is protected !!
Scroll to Top