(ನ್ಯೂಸ್ ಕಡಬ) newskadaba.com , ಮೇ.13. ಪಾಕಿಸ್ತಾನವನ್ನು ಎರಡು ಭಾಗ ಮಾಡಿ ಸದೆಬಡೆದ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ರವರ ಹೋರಾಟವನ್ನು ಇಂದು ದೇಶದ ಪ್ರತಿಯೊಬ್ಬ ನಾಗರೀಕರು ಸರಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಹೇಳಿದ್ದಾರೆ.ಅವರ ದಿಟ್ಟತನದ ಕ್ರಮಗಳು ಇಂದಿಗೂ ಅವಿಸರಣೀಯ ಹಾಗೂ ಭಾರತದ ಸೈನಿಕರಿಗೆ ಇಂದಿರಾಗಾಂಧಿ ಅವರು ನೀಡಿದ ನೈತಿಕ ಬೆಂಬಲದಿಂದ ಇಡೀ ಪಾಕಿಸ್ತಾನವನ್ನು ಬಗ್ಗು ಬಡಿಯಲು ಸಾಧ್ಯವಾಯಿತು ಎಂದು ದೇಶದ ಜನತೆ ಹೆಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.
ಭಾರತದ ಸೈನಿಕರು ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ನೆಲೆಗಳನ್ನು ದ್ವಂಸ ಮಾಡಿದ್ದಾರೆ ಪಾಕಿಸ್ತಾನದ ಬೆಂಬಲಿತ ಉಗ್ರರು ಭಾರತದ ಮುಗ್ಧ ನಾಗರೀಕರನ್ನ ಕೊಂದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿ ಇದ್ದು ನಂತರ ದೇಶಕ್ಕೆ ಆಗಮಿಸಿ ಉಗ್ರರಿಂದ ಬಲಿಯಾದ ಕುಟುಂಬಗಳಿಗೆ ಸಾಂತ್ವಾನ ಹೇಳುವುದಾಗಲಿ ಅಥವಾ ಮತಪಟ್ಟ ಕುಟುಂಬಳಿಗೆ ಪರಿಹಾರ ಘೋಷಿಸುವುದಾಗಲಿ ಏನನ್ನು ಮಾಡದೆ ಕೇವಲ ಸಭೆಗಳನ್ನು ನಡೆಸಿ ಹೈ ವೋಲ್ಟೇಜ್ ಮೀಟಿಂಗ್ ಎಂದು ಪ್ರಚಾರ ಪಡೆದಿದ್ದು ಮಾತ್ರ ನಿಮ ಸಾಧನೆಯಾಗಿದೆ ಎಂದು ಟೀಕಿಸಿದ್ದಾರೆ.
ನಿನ್ನೆ ತಾವು ದೇಶವನ್ನುದ್ದೇಶಿಸಿ ಮಾಡಿದ ಭಾಷಣವನ್ನು ನೈತಿಕ ಸ್ಥೈರ್ಯ ತುಂಬಿಸುವ ಕೆಲಸ ಮಾಡಿಲ್ಲ. ನಮ ದೇಶದ ಆಂತರಿಕ ವಿಚಾರದಲ್ಲಿ ಮೂರನೇಯವರು ಹಸ್ತಕ್ಷೇಪ ಖಂಡನೀಯ ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.ಕಾಶೀರ ವಿಷಯ ಬಗ್ಗೆ ಮೂರನೇಯವರು ಮೂಗು ತೂರಿಸುವ ಪರಿಸ್ಥಿತಿ ನಿರ್ಮಾಣವುವಾಗಬಾರದು. ಈ ಸಂಬಂಧ ಟ್ರಂಪ್ ಹೇಳಿಕೆಯನ್ನ ಬಹಿರಂಗವಾಗಿ ಖಂಡಿಸಬೇಕು ಎಂದು ಹೇಳಿದರು.