(ನ್ಯೂಸ್ ಕಡಬ) newskadaba.com , ಮೇ.13. ಮೋದಿ ಭಾಷಣದ ಬೆನ್ನಲ್ಲೇ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ಜಮ್ಮು ಹಾಗೂ ಪಂಜಾಬ್ನಲ್ಲಿ ಪಾಕ್ ಡ್ರೋನ್ ದಾಳಿ ನಡೆಸಿದೆ.
ಜಮ್ಮು, ಸಾಂಬಾ ಸೇರಿದಂತೆ ಹಲವೆಡೆ ಡ್ರೋನ್ಗಳು ಹಾರಾಟ ನಡೆಸಿವೆ. ಅಲ್ಲದೇ ಪಂಜಾಬ್ನ ಅಮೃತಸರದಲ್ಲೂ ಡ್ರೋನ್ಗಳ ಹಾರಾಟ ಕಂಡುಬಂದಿದೆ. ಡ್ರೋನ್ ಹಾರಾಟ ಹಿನ್ನೆಲೆ ಅಮೃತಸರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಮಾತ್ರವಲ್ಲದೇ ಮನೆಯಿಂದ ನಾಗರಿಕರು ಹೊರಬಾರದಂತೆ ಸೂಚನೆ ನೀಡಲಾಗಿದೆ.
ಸಾಂಬಾ ಪ್ರದೇಶದಲ್ಲಿ ಬ್ಲಾಕ್ಔಟ್ ಘೋಷಿಸಲಾಗಿದೆ. ಸುಮಾರು 50-60 ಪಾಕ್ ಡ್ರೋನ್ಗಳು ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ. ಸದ್ಯ ಪಾಕ್ನ ಎಲ್ಲಾ ಡ್ರೋನ್ಗಳನ್ನು ಭಾರತದ ಏರ್ ಡಿಫೆನ್ಸ್ ಸಿಸ್ಟಂ ನೆಲಕ್ಕೆ ಉರುಳಿಸಿದೆ. ಪಾಕ್ ಡ್ರೋನ್ ದಾಳಿ ಬೆನ್ನಲ್ಲೇ ದೆಹಲಿ-ಅಮೃತಸರದ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಇಂಡಿಗೋ ವಿಮಾನ ಮತ್ತೆ ದೆಹಲಿಗೆ ವಾಪಸ್ ಆಗಿದೆ.