(ನ್ಯೂಸ್ ಕಡಬ) newskadaba.com , ಮೇ.12. ಬೆಂಗಳೂರು: ಭಾರತ-ಪಾಕಿಸ್ತಾನ ನಡುವೆ ಉಂಟಾದ ಉದ್ವಿಗ್ನ ಪರಿಸ್ಥಿತಿ ತಿಳಿಯಾಗುತ್ತಿದ್ದು, ಷೇರು ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ. ಇತ್ತ ಬೆಂಗಳೂರಿನಲ್ಲಿ ಸೋಮವಾರ (ಮೇ 12) ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 165 ರೂ. ಇಳಿಕೆಯಾಗಿದ್ದು, 8,880 ರೂ.ಗೆ ತಲುಪಿದೆ.

ಇನ್ನು 24 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 180 ರೂ. ಕಡಿಮೆಯಾಗಿ, 9,688 ರೂ.ಗೆ ಬಂದು ಮುಟ್ಟಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 71,040 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 88,800 ರೂ. ಮತ್ತು 100 ಗ್ರಾಂಗೆ 8,88,000 ರೂ. ನೀಡಬೇಕಾಗುತ್ತದೆ. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 77,504 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 96,880 ರೂ. ಮತ್ತು 100 ಗ್ರಾಂಗೆ 9,68,800 ರೂ. ಪಾವತಿಸಬೇಕಾಗುತ್ತದೆ.