ಜೇಮ್ಸ್, ಜೆಲ್ಲಿಸ್‌ಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ; ಟೆಸ್ಟ್ಗೆ ಮುಂದಾದ ಆಹಾರ ಇಲಾಖೆ

(ನ್ಯೂಸ್ ಕಡಬ) newskadaba.com, ಮೇ.06: ಮಕ್ಕಳಿಗೆ ಚಾಕೊಲೇಟ್, ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್ ಬಹಳ ಅಚ್ಚುಮೆಚ್ಚು. ಆದರೆ ಇವುಗಳಲ್ಲಿ ಕೃತಕ ಕಲರ್ ಹಾಗೂ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದ್ದು, ಇವುಗಳನ್ನು ಮಕ್ಕಳಿಗೆ ನೀಡುವ ಮುನ್ನ ಪೋಷಕರು ಎಚ್ಚರಿಕೆ ವಹಿಸುವಂತೆ ಆಹಾರ ಇಲಾಖೆ ತಿಳಿಸಿದೆ.

ಚಾಕೊಲೇಟ್, ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್‌ಗಳಲ್ಲಿ ಕೃತಕ ಕಲರ್ ಹಾಗೂ ಹಾನಿಕಾರಕ ರಾಸಾಯನಿಕ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇವುಗಳ ಸೇವನೆಯಿಂದ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳು ಬರುವ ಜೊತೆಗೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಎಫ್‌ಎಸ್‌ಎಸ್‌ಎಐ ಸೂಚನೆ ಬೆನ್ನಲ್ಲೇ ರಾಜ್ಯದಲ್ಲಿ ಆಹಾರ ಇಲಾಖೆ ಅಲರ್ಟ್ ಆಗಿದ್ದು, ಸ್ಯಾಂಪಲ್ಸ್ ಪಡೆದು ಆಹಾರ ಇಲಾಖೆಯ ಲ್ಯಾಬ್‌ಗಳಲ್ಲಿ ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ.

Also Read  ವಿಟ್ಲ: ನಿರ್ಜನ ಪ್ರದೇಶದಲ್ಲಿ ತಲೆಬುರುಡು, ಎಲುಬು ಪತ್ತೆ

ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್‌ಗಳಲ್ಲಿ ಕೃತಕ ಕಲರ್ ಬಳಕೆ ಮಾಡಲಾಗುತ್ತಿದೆ. ತಯಾರಿಕಾ ಘಟಕಗಳಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಚಾಕೊಲೇಟ್‌ಗಳ ತಯಾರಿಕೆಯಲ್ಲಿ ಕೆಲವು ರಾಸಾಯನಿಕಗಳ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದೆ.

error: Content is protected !!
Scroll to Top