(ನ್ಯೂಸ್ ಕಡಬ) newskadaba.com, ಮೇ.05: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವವರ ಸ್ಮರಣಾರ್ಥ ಸ್ಟಟ್ಗಾರ್ಟ್ನಲ್ಲಿ ಭಾರತೀಯ ಸಮುದಾಯವು ಶಾಂತಿಯುತ ಮೆರವಣಿಗೆಯನ್ನು ನಡೆಸಿತು.

ಭಾರತೀಯ ಪರಿವಾರ್ ಬಿಡಬ್ಲ್ಯೂ ಬ್ಯಾನರ್ ಅಡಿಯಲ್ಲಿ, ಸ್ಟಟ್‌ಗಾರ್ಟ್‌ನಲ್ಲಿರುವ ಭಾರತೀಯ ವಲಸಿಗರು, ಭಾರತದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದ 26 ಮುಗ್ಧ ಜೀವಗಳಿಗೆ ಗೌರವ ಸಲ್ಲಿಸಲು ಸ್ಕ್ಲೋಸ್‌ಪ್ಲಾಟ್ಜ್‌ನಲ್ಲಿ ಶಾಂತಿಯುತ ಮೆರವಣಿಗೆಯನ್ನು ಭಾನುವಾರ ಆಯೋಜಿಸಿದ್ದರು.
ಸಂಜೆ 5 ಗಂಟೆಗೆ ಭಾರತೀಯ ಸಮುದಾಯದ 300 ಕ್ಕೂ ಹೆಚ್ಚು ಸದಸ್ಯರ ಆಗಮನದೊಂದಿಗೆ ಪ್ರಾರಂಭವಾಯಿತು. ಎಲ್ಲಾ ಭಾರತೀಯರು ಹಣೆಯ ಮೇಲೆ ತಿಲಕವನ್ನು ಹಾಕಿಕೊಂಡಿದ್ದರುಕಾರ್ಯಕ್ರಮದಲ್ಲಿ ಶಾಂತಿ ಮಾರ್ಗ ಹಾಗೂ ಮೃತರ ಸ್ಮರಣಾರ್ಥ ಎರಡು ನಿಮಿಷಗಳ ಮೌನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅತ್ಯಂತ ಹೃದಯಸ್ಪರ್ಶಿ ಕ್ಷಣಗಳಲ್ಲಿ ಹನುಮಾನ್ ಚಾಲೀಸಾದ ಸಾಮೂಹಿಕ ಪಠಣವು ನಡೆಯಿತು. ಈ ಮೂಲಕ ಎಲ್ಲರಲ್ಲಿ ಧೈರ್ಯ, ನಂಬಿಕೆ ಮತ್ತು ಏಕತೆಯ ಭಾವವನ್ನು ಮತ್ತೊಮ್ಮೆ ಮೂಡಿಸಿತು.