(ನ್ಯೂಸ್ ಕಡಬ) newskadaba.com, ಮೇ.03: ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಭುಗಿಲೆದಿದ್ದು, ಇದರ ನಡುವೆಯೇ ಭಾರತೀಯ ಸೇನೆಯ ದಾಳಿ ಆತಂಕದಲ್ಲಿರುವ ಪಾಕಿಸ್ತಾನ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದೆ.


ಈ ಬಗ್ಗೆ ಪಾಕಿಸ್ತಾನ ಸೇನಾ ಮೂಲಗಳು ಮಾಹಿತಿ ನೀಡಿದ್ದು, 450 ಕಿ.ಮೀ ವ್ಯಾಪ್ತಿಯ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಪಾಕಿಸ್ತಾನ ಅಬ್ದಾಲಿ ವೆಪನ್ ಸಿಸ್ಟಮ್‌ನ ಯಶಸ್ವಿ ತರಬೇತಿ ಉಡಾವಣೆಯನ್ನು ನಡೆಸಿರುವುದಾಗಿ ಪಾಕಿಸ್ತಾನ ಶನಿವಾರ ಘೋಷಿಸಿದೆ.
“ಈ ಉಡಾವಣೆಯು ಸೈನಿಕರ ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳುವ ಮತ್ತು ಕ್ಷಿಪಣಿಯ ಸುಧಾರಿತ ಸಂಚರಣೆ ವ್ಯವಸ್ಥೆ ಮತ್ತು ವರ್ಧಿತ ಕುಶಲತೆಯ ವೈಶಿಷ್ಟ್ಯಗಳು ಸೇರಿದಂತೆ ಪ್ರಮುಖ ತಾಂತ್ರಿಕ ನಿಯತಾಂಕಗಳನ್ನು ಮೌಲ್ಯೀಕರಿಸುವ ಗುರಿಯನ್ನು ಹೊಂದಿತ್ತು” ಎಂದು ಪಾಕಿಸ್ತಾನ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.