ಪದವು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ವಾಹನಕ್ಕೆ ಬೆಂಕಿ

(ನ್ಯೂಸ್ ಕಡಬ) newskadaba.com ಕಡಬ, ಎ.01. ಶಾರ್ಟ್ ಸರ್ಕ್ಯೂಟ್ ಕಾರಣದಿಂದಾಗಿ ವಾಹನದಲ್ಲಿ ಬೆಂಕಿಯುಂಟಾಗಿದ್ದು, ಊರವರು ಬೆಂಕಿಯನ್ನು ನಂದಿಸಿದ್ದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದ ಘಟನೆ ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಸಮೀಪದ ಪದವು ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಕ್ಯಾಟರಿಂಗ್ ಸಂಸ್ಥೆಗೆ ಸೇರಿದ ಟಾಟಾ ಏಸ್ ವಾಹನವು ಆಹಾರಗಳನ್ನು ತುಂಬಿಸಿಕೊಂಡು ಕಡಬ ಕಡೆಗೆ ತೆರಳುತ್ತಿದ್ದಾಗ ಪದವು ಸಮೀಪ ತಲುಪಿದಾಗ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ‌ ಕಾಣಿಸಿಕೊಂಡಿದೆ. ತಕ್ಷಣವೇ ನೀರು ಸುರಿದು ಬೆಂಕಿ ನಂದಿಸಲು ಸಹಕರಿಸಿದ್ದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಅದೇ ದಾರಿಯಿಂದಾಗಿ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನವರು ಅಗ್ನಿಶಮನ ಯಂತ್ರವನ್ನು ಕೊಟ್ಟು ಬೆಂಕಿ ನಂದಿಸಲು ಸಹಕರಿಸಿದರು. ವಾಹನದಲ್ಲಿದ್ದ ಆಹಾರಗಳನ್ನು ಬೇರೆ ವಾಹನದ ಮೂಲಕ ತೆಗೆದುಕೊಂಡು ಹೋಗಲಾಯಿತು.

Also Read  ಇಂದಿನ (ಎ. 03) ಕೊರೋನಾ ಅಪ್ಡೇಟ್ಸ್ ➤ ಕಡಬ ತಾಲೂಕಿನ 6 ಮಂದಿಗೆ ಕೊರೋನಾ ಪಾಸಿಟಿವ್

error: Content is protected !!
Scroll to Top