11 ವರ್ಷಗಳ ನಂತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸ್ನೇಹ ಸಮ್ಮಿಲನ

(ನ್ಯೂಸ್ ಕಡಬ) newskadaba.com ಕಡಬ, ಜು.03. ನಮ್ಮ ಜೀವನದ ಪ್ರಾಥಮಿಕ, ಪ್ರೌಢ ಘಟ್ಟದಲ್ಲಿನ ತಪ್ಪುಗಳನ್ನು ತಿದ್ದಿ ಸರಿಯಾದ ಹಾದಿಯಲ್ಲಿ ಬದುಕಿ ಸಮಾಜದ ಉತ್ತಮ ಪ್ರಜೆಯನ್ನಾಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ನಮ್ಮೆಲ್ಲಾ ಶಿಕ್ಷಕರನ್ನು ನಾವು ನೆನಪಿಸುವುದೇ ಇಲ್ಲ. ಅದರಲ್ಲೂ ಸುಮಾರು 10 ವರ್ಷಗಳಿಗೂ ಹಿಂದೆ ಅಕ್ಷರ ಜ್ಞಾನವನ್ನು ಕಲಿಸಿದ ಶಿಕ್ಷಕರನ್ನು ಕರೆದು ಅವರನ್ನು ಸನ್ಮಾನಿಸಿದರೆ ಅವರಿಗಾಗುವ ಆನಂದ ಹೇಗಿರಬಹುದು…? ಅದಕ್ಕೆ ಉದಾಹರಣೆಯೆಂಬಂತೆ ಕಡಬದ ಕ್ನಾನಾಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 2006ನೇ ಸಾಲಿನಲ್ಲಿ ಹತ್ತನೇ ತರಗತಿ ಉತ್ತೀರ್ಣರಾಗಿ ಇದೀಗ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ವಿದ್ಯಾರ್ಥಿಗಳೆಲ್ಲರೂ ಹಿರಿಯ ವಿದ್ಯಾರ್ಥಿ ಆಲ್ವಿನ್ ಚೆರಿಯನ್ ರವರ ನೇತೃತ್ವದಲ್ಲಿ ಸೇರಿಕೊಂಡು ತಮಗೆ ಜ್ಞಾನದ ಧಾರೆಯೆರದ ಶಿಕ್ಷಕರನ್ನು ಕರೆದು ಮಂಗಳೂರಿನ ಓಷಿಯನ್ ಪರ್ಲ್ ಹೊಟೇಲಿನಲ್ಲಿ ಸ್ನೇಹ-ಸಮ್ಮಿಲನ ನೆರವೇರಿಸಿ ಶಿಕ್ಷಕರಿಂದ ಪ್ರಶಂಸೆಗೀಡಾಗಿದ್ದಾರೆ.

ಈ ಹಿಂದೆ ಕ್ನಾನಾಯ ಆಂಗ್ಲ ಮಾಧ್ಯಮ ಶಾಲೆಯಲ್ಲಿದ್ದು, ಪ್ರಸ್ತುತ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಶಿಕ್ಷಕರನ್ನೆಲ್ಲ ಒಂದೇ ವೇದಿಕೆ ಕರೆದು ಅವರನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆನಂದಭಾಷ್ಪದೊಂದಿಗೆ ಭಾವೋದ್ವೇಗಕ್ಕೊಳಗಾದ ಶಿಕ್ಷಕರು ನಮ್ಮ ಮಾರ್ಗದರ್ಶನದಲ್ಲಿ ನಡೆದ ವಿದ್ಯಾರ್ಥಿಗಳು 10 ವರ್ಷಗಳ ನಂತರ ನಮ್ಮನ್ನೆಲ್ಲಾ ಒಂದೆಡೆ ಸೇರಿಸಿ ಹಿಂದಿನ ಸಿಹಿ-ಕಹಿ ಘಟನೆಗಳನ್ನು ಮೆಲುಕು ಹಾಕಿರುವುದು ಮರೆಯಲು ಅಸಾಧ್ಯವಾಗಿದೆ. ಇಂತಹ ಶಿಕ್ಷಣ ಪ್ರೇಮಿ ವಿದ್ಯಾರ್ಥಿಗಳಿಗೆ ನಾವು ಶೈಕ್ಷಣಿಕ ಮಾರ್ಗದರ್ಶನ ನೀಡಿರುವುದು ನಮಗೆ ಹೆಮ್ಮೆ ಅನ್ನಿಸುತ್ತಿದೆ. ಇಂದಿನ ದಿನಗಳಲ್ಲಿ ತಮಗೆ ಮಾರ್ಗದರ್ಶನ ನೀಡಿದ ಶಿಕ್ಷಕರೊಂದಿಗೆ ಮುಖ ತಿರುಗಿಸಿಕೊಂಡು ನಡೆಯುತ್ತಿರುವ ವಿದ್ಯಾರ್ಥಿಗಳಿರುವಾಗ ತಮ್ಮ ಪ್ರೌಢ ಘಟ್ಟದಲ್ಲಿ ನೀಡಿದ ಶಿಕ್ಷಣಕ್ಕೆ ಮಹತ್ವ ನೀಡಿ ಅಂದಿನ ದಿನಗಳನ್ನು ನೆನಪು ಮಾಡಿರುವುದು ಖುಷಿಯನ್ನು ನೀಡಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕರಾದ ಜೆಪಿಎಂ. ಚೆರಿಯನ್, ಮೇಫಿ ಚೆರಿಯನ್, ಕುಸುಮಾಧರ, ಜಿನ್ಸಿ ಫಿಲಿಪ್, ತ್ರೇಸಿಯಾ, ಸುಗುಣಾ, ಜೈನಿ ಸೈಮನ್, ಜೆಮ್ಸಿ, ಮೇಫಿ ಚೆರಿಯನ್, ಅಂಬಿಲಿ ಪ್ರಸನ್ನ, ಜಿಜಿ ಸುಜಿತ್, ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರಾದ ಫಾ| ಟಿಜೋ ಮತ್ತು ಸಿಸ್ಟರ್ ನವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Also Read  ಸೂರಿಕುಮೇರು: ಸರಣಿ ಕಳ್ಳತನ ➤ ಅಂಗಡಿ ಹಾಗೂ ಎರಡು ಮನೆಯ ಬೀಗ ಮುರಿದು ನಗ-ನಗದು ಕಳವು

ಪ್ರಮೋದ್ ಜೇಮ್ಸ್‌ ಸ್ವಾಗತಿಸಿ, ಬೀನಾ ವಂದಿಸಿದರು. ಗ್ಲೆನ್ಸನ್ ಟೋನಿ ಕಾರ್ಯಕ್ರಮ ನಿರೂಪಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

Also Read  ಗಣಿತ ಪರೀಕ್ಷೆಗೆ ಗೈರಾದ ಬಾಲಕಿ ➤ ತನಿಖೆಯ ವೇಳೆ ಬಾಲ್ಯವಿವಾಹ ಪ್ರಕರಣ ಬೆಳಕಿಗೆ

 

 

 

 

 

 

 

 

 

 

error: Content is protected !!
Scroll to Top