(ನ್ಯೂಸ್ ಕಡಬ) newskadaba.com ಎ. 29: ನವದೆಹಲಿ: ಡಿಜಿಟಲ್ ಬ್ಯಾಂಕಿಂಗ್ ನತ್ತ ಇನ್ನೂ ನೀವು ಹೋಗಿಲ್ಲವೇ? ಹೆಚ್ಚಾಗಿ ಎಟಿಎಂ ಬಳಸುತ್ತಿದ್ದೀರಾ ? ಹಾಗಿದ್ದರೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಈ ಆದೇಶ ನಿಮಗೆ ಶಾಕ್ ನೀಡಬಹುದು. ಮೇ 1ರಿಂದ ಜಾರಿಯಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ (ATM) ವಹಿವಾಟಿನ) ಉಚಿತ ಮಿತಿ ಮತ್ತು ಶುಲ್ಕಗಳಲ್ಲಿ ಬದಲಾವಣೆ ಮಾಡಿ ಆದೇಶಿಸಿದೆ. ಈಗಲೂ ಹೆಚ್ಚಾಗಿ ನೀವು ಎಟಿಎಂ ಮೂಲಕ ವಹಿವಾಟು ನಡೆಸುತ್ತಿದ್ದರೆ ಇನ್ನು ಮುಂದೆ ದುಬಾರಿ ಶುಲ್ಕ ನಿಮ್ಮ ಖಾತೆಯಿಂದ ಕಡಿತಗೊಳ್ಳಬಹುದು.


ಭಾರತೀಯ ರಿಸರ್ವ್ ಬ್ಯಾಂಕ್ ಮೇ 1ರಿಂದ ಜಾರಿಯಾಗುವಂತೆ ಪರಿಷ್ಕೃತ ಎಟಿಎಂ ವಹಿವಾಟಿನ ಉಚಿತ ಮಿತಿಗಳು ಮತ್ತು ಶುಲ್ಕಗಳನ್ನು ಪರಿಚಯಿಸಿದೆ. ಗ್ರಾಹಕರು ಮೆಟ್ರೋ ಪ್ರದೇಶಗಳಲ್ಲಿ ಮೂರು ಮತ್ತು ಇತರೆಡೆ ಐದು ಉಚಿತ ಎಟಿಎಂ ವಹಿವಾಟುಗಳನ್ನು ಪಡೆಯಬಹುದು. ಇವುಗಳನ್ನು ಮೀರಿ ಎಟಿಎಂ ಬಳಸಿದರೆ 23 ರೂ. ಶುಲ್ಕ ಅನ್ವಯಾವಾಗುತ್ತದೆ. ಹೆಚ್ ಡಿಎಫ್ ಸಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳು ಗ್ರಾಹಕರಿಗೆ ಎಟಿಎಂ ಬಳಕೆಯನ್ನು ಕಡಿಮೆ ಮಾಡಲು ಪ್ರೇರೇಪಿಸುತ್ತಿವೆ. ಇದಕ್ಕಾಗಿ ಡಿಜಿಟಲ್ ಬ್ಯಾಂಕಿಂಗ್ ಅನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ನವೀಕರಿಸಿದ ಶುಲ್ಕಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತಿವೆ.