(ನ್ಯೂಸ್ ಕಡಬ) newskadaba.com ಎ. 28 ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ದಾಳಿ ಮಾಡಲು ಬಿಡುವುದಿಲ್ಲ, ಪಾಕಿಸ್ತಾನದ ವಿರುದ್ಧ ಹೋರಾಡುವ ಧೈರ್ಯ ಭಾರತಕ್ಕೆ ಇಲ್ಲ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ತಿಳಿಸಿದ್ದಾನೆ.


ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕ್‌ಗೆ ಬೆಂಬಲ ನೀಡಿರುವ ಉಗ್ರ ಪನ್ನು, ಭಾರತೀಯ ಸೇನೆ ಪಂಜಾಬ್ ಮೂಲಕ ಹಾದುಹೋಗಲು ಮತ್ತು ಪಾಕಿಸ್ತಾನದ ಮೇಲೆ ದಾಳಿ ಮಾಡಲು ನಾವು ಬಿಡುವುದಿಲ್ಲ, ಪಾಕಿಸ್ತಾನದ ವಿರುದ್ಧ ಹೋರಾಡಲು ಭಾರತಕ್ಕೆ ಧೈರ್ಯವಿಲ್ಲ. ನಾವು, 20 ಮಿಲಿಯನ್ ಸಿಖ್ಖರು, ಪಾಕಿಸ್ತಾನದೊಂದಿಗೆ ಬಂಡೆಯಂತೆ ನಿಂತಿದ್ದೇವೆ. ಭಾರತದಲ್ಲಿ ಸಿಖ್ಖರು ಮತ್ತು ಇತರ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಈಗ ಕಾಲ ಬದಲಾಗಿದೆ, ಇದು 1965 ಅಥವಾ 1971 ಅಲ್ಲ, 2025 ಎಂದಿದ್ದಾನೆ. ಪಾಕಿಸ್ತಾನ ಎಂದಿಗೂ ಅವರಾಗಿಯೇ ದಾಳಿ ಮಾಡಲು ಬರುವುದಿಲ್ಲ, ಯಾರೇ ದಾಳಿ ಮಾಡಿದರೂ ಅವರಿಗೆ ಕೆಟ್ಟ ಅಂತ್ಯವಿರುತ್ತದೆ. ಅದು ಇಂದಿರಾ ಗಾಂಧಿ, ನರೇಂದ್ರ ಮೋದಿ ಅಥವಾ ಅಮಿತ್ ಶಾ ಆಗಿರಬಹುದು. ರಾಜಕೀಯ ಲಾಭಕ್ಕಾಗಿ ಭಾರತವು ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಕೊಂದಿದೆ ಎಂದು ಆರೋಪಿಸಿದ್ದಾನೆ.