(ನ್ಯೂಸ್ ಕಡಬ) newskadaba.com ಎ. 28 ಮಂಗಳೂರು: ಕೇಂದ್ರ ಸರ್ಕಾರ ಪಾಕ್ ಪ್ರಜೆಗಳಿಗೆ ಭಾರತ ತೊರೆಯಲು ನೀಡಿದ್ದ ಗಡುವು ಮುಗಿದಿದೆ. ಆದಾಗ್ಯೂ ಭಾರತ ತೊರೆಯದೇ ಇಲ್ಲೇ ಉಳಿದಿದವರನ್ನು ಬಂಧಿಸಿ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 3 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಕೇಂದ್ರವು ಪಾಕ್ ಪ್ರಜೆಗಳಿಗೆ ಭಾರತ ಬಿಟ್ಟು ವಾಪಸ್ ಪಾಕಿಸ್ತಾನಕ್ಕೆ ಮರಳುವಂತೆ ಆದೇಶಿಸಲಾಗಿತ್ತು. ಸಾರ್ಕ್ ವೀಸಾ ಹೊಂದಿರುವವರು ಏ.26ರೊಳಗೆ ದೇಶ ಬಿಡಬೇಕಿತ್ತು. ವೈದ್ಯಕೀಯ ವೀಸಾ ಹೊಂದಿರುವ ಪಾಕಿಸ್ತಾನಿ ಪ್ರಜೆಗಳು ಏ.29ರೊಳಗೆ ದೇಶ ಬಿಡಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಏ.26ರೊಳಗೆ ನಿರ್ಗಮಿಸಬೇಕಾದ 12 ವಿಭಾಗಗಳ ವೀಸಾಗಳಲ್ಲಿ ವೀಸಾ ಆನ್ ಆಗಮನ, ವ್ಯವಹಾರ, ಚಲನಚಿತ್ರ, ಪತ್ರಕರ್ತರು, ಸಾರಿಗೆ, ಸಮ್ಮೇಳನ, ಪರ್ವತಾರೋಹಣ, ವಿದ್ಯಾರ್ಥಿಗಳು, ಸಂದರ್ಶಕ, ಪ್ರವಾಸಿಗರು, ಯಾತ್ರಿಗಳ ವೀಸಾಗಳು ಸೇರಿತ್ತು. ಆದರೆ ದೇಶ ತೊರೆಯದ ಪಾಕ್ ಪ್ರಜೆಗಳನ್ನು ಏ.4 ರಿಂದ ಜಾರಿಗೆ ಬಂದ ವಲಸೆ ಮತ್ತು ವಿದೇಶಿಯರ ಕಾಯ್ದೆ 2025ರ ಅಡಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ.ಗಳ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಎಂದು ಕೇಂದ್ರ ಎಚ್ಚರಿಸಿದೆ.