ಬಾವಿಗೆ ಬಿದ್ದಒಬ್ಬನ ರಕ್ಷಣೆಗೆ ಒಬ್ಬರ ಹಿಂದೊಬ್ಬರು ಹೋಗಿ 8 ಜನ ಸಾವು

(ನ್ಯೂಸ್ ಕಡಬ) newskadaba.com, ಎ.04 : ಬಾವಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಒಬ್ಬರಾದ ಮೇಲೆ ಒಬ್ಬರಂತೆ ಒಟ್ಟು 7 ಜನ ಹೋಗಿ ಎಂಟು ಜನ ಉಸಿರುಕಟ್ಟಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಾವಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಹೋದ ವೇಳೆ ಈ ದುರಂತ ನಡೆದಿದೆ. ಮಧ್ಯಪ್ರದೇಶದ ಖಂಡ್ವಾದಲ್ಲಿ ಈ ಘಟನೆ ನಡೆದಿದ್ದು, ರಕ್ಷಿಸಲು ಹೋದ ಒಬ್ಬರೂ ಹಿಂದಿರುಗಿ ಬಂದಿಲ್ಲ.

ಈ ವಿಚಾರ ತಿಳಿದು ರಕ್ಷಣಾ ತಂದ ಸ್ಥಳಕ್ಕೆ ಹೋಗುವ ವೇಳೆ ಎಲ್ಲರೂ ಬಾವಿಯ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಯುವಕರ ಈ ಹಠಾತ್ ಸಾವಿನಿಂದ ಖಂಡ್ವಾ ಜಿಲ್ಲೆಯ ಕೊಂಡಾವತ್ ಗ್ರಾಮ ಶೋಕದಲ್ಲಿ ಮುಳುಗಿದೆ. ಇಲ್ಲಿ ಗಂಗೌರ್ ಹಬ್ಬದ ಆಚರಣೆ ನಡೆಯುತ್ತಿತ್ತು. ಆದರೆ ಯುವಕರ ಸಾವಿನಿಂದಾಗಿ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಶೋಕ ಆವರಿಸಿದೆ. ಮೃತರಾದ 8 ಜನರೂ ಕೂಡ ಗಂಗೌರ್‌ ಹಬ್ಬದ ಆಚರಣೆಯ ಭಾಗವಾಗಿ ನೀರಿನಲ್ಲಿ ಮುಳುಗುವುದಕ್ಕಾಗಿ ಈ ಬಾವಿಯನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿದ್ದ ವೇಳೆ ಈ ದುರಂತ ನಡೆದಿದೆ.

error: Content is protected !!
Scroll to Top