ತರಬೇತಿ ಕಾರ್ಯಾಚರಣೆಯ ಜಾಗ್ವಾರ್‌ ಯುದ್ಧ ವಿಮಾನ ಪತನ – ಪೈಲಟ್‌ ಸಾವು

(ನ್ಯೂಸ್ ಕಡಬ) newskadaba.com , ಏ.03: ಗುಜರಾತ್‌ನ ಜಮ್‌ನಗರದಲ್ಲಿ ಬುಧವಾರ ನಡೆದ ರಾತ್ರಿ ಕಾರ್ಯಾಚರಣೆಯಲ್ಲಿ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿದೆ.ಎರಡು ಆಸನಗಳ ಯುದ್ಧ ವಿಮಾನ ಅಪಘಾತಕ್ಕೀಡಾಗಿ, ಭಾರತೀಯ ವಾಯುಪಡೆಯ ಪೈಲಟ್ ಮೃತಪಟ್ಟಿದ್ದಾರೆ. ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪತನಗೊಂಡ ವಿಮಾನದಿಂದ ಒಬ್ಬ ಪೈಲಟ್‌ ರಕ್ಷಿಸಲಾಯಿತು. ಮತ್ತೊಬ್ಬರು ನಾಪತ್ತೆಯಾಗಿದ್ದರು. ರಕ್ಷಿಸಿದ ಪೈಲಟ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಪ್ರೇಮ್‌ಸುಖ್ ಡೆಲು ತಿಳಿಸಿದ್ದಾರೆ. ಜಮ್‌ನಗರದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಸುವರ್ಡಾ ಗ್ರಾಮದಲ್ಲಿ ತೆರೆದ ಮೈದಾನದಲ್ಲಿ ಯುದ್ಧ ವಿಮಾನ ಅಪಘಾತಕ್ಕೀಡಾಯಿತು. ಪತನದ ಬೆನ್ನಲ್ಲೇ ಬೆಂಕಿ ಹೊತ್ತಿಕೊಂಡಿತ್ತು.

error: Content is protected !!
Scroll to Top