ಮಂಗಳೂರು : ಮನೆಯ ಕಿಟಿಕಿ ಮುರಿದು 1 ಕೆ.ಜಿ. ಚಿನ್ನಾಭರಣ ಕದ್ದೊಯ್ದ ಕಳ್ಳರು

(ನ್ಯೂಸ್ ಕಡಬ) newskadaba.com , .02 : ಮನೆಯೊಂದರ ಕಿಟಿಕಿಯನ್ನು ಮುರಿದು ಮನೆಯೊಳಗೆ ಲಾಕರ್‌ನಲ್ಲಿದ್ದ ಸುಮಾರು 1 ಕೆ.ಜಿ. ಚಿನ್ನಾಭರಣ ಕಳವು ಮಾಡಲಾದ ಘಟನೆ ಬಜ್ಪೆಯ ಪೆರ್ಮುದೆ ಪೇಟೆಯಲ್ಲಿ ನಡೆದಿದೆ. ಪೆರ್ಮುದೆಯ ಜಾನ್ವಿನ್‌ ಪಿಂಟೋ  ವರ ಮನೆಯಿಂದ ಈ ಕಳ್ಳತನ ನಡೆದಿದೆ. ಅಜಾನ್ವಿನ್‌ ಪಿಂಟೋ ಹಾಗೂ ಅವರ ಪುತ್ರ ಪ್ರವೀಣ್‌ ಪಿಂಟೋ ಕುವೈಟ್‌ನಲ್ಲಿದ್ದಾರೆ.

ಮನೆಯಲ್ಲಿ ಯಾರೂ ಇರಲಿಲ್ಲ. ಇವರ ಮನೆಯ ಸುತ್ತ 16 ಸಿಸಿ ಕ್ಯಾಮೆರಾ ಇದ್ದರೂ, ಕೆಮರಾ ಇಲ್ಲದ ಕಡೆಯಿಂದ ಬಂದು ಕೆಮರಾದ ದಿಕ್ಕನ್ನು ಬದಲಿಸಿ ಕಿಟಿಕಿಯ ಕಬ್ಬಿಣದ ರಾಡ್‌ ಅನ್ನು ಮುರಿದು ಕಳ್ಳರು ಮನೆಯೊಳಗೆ ನುಗ್ಗಿದ್ದರು. ಈ ಮನೆಯಲ್ಲಿ ಮುಧೋಳ, ಜರ್ಮನ್‌ ಶೆಫ‌ರ್ಡ್‌ ಸೇರಿದಂತೆ 8 ಸಾಕು ನಾಯಿಗಳಿವೆ. ಇವುಗಳ ಕಣ್ತಪ್ಪಿಸಿ ಕೃತ್ಯವೆಸಗಿದ್ದಾರೆ.

error: Content is protected !!
Scroll to Top