ಕೇಂದ್ರ ಸರಕಾರದಿಂದ ಸಂವಿಧಾನದ 93ನೇ ವಿಧಿ ಉಲ್ಲಂಘನೆ : ಸಾಗರ್ ಖಂಡ್ರೆ

(ನ್ಯೂಸ್ ಕಡಬ) newskadaba.com , ಏ.01 ಬೆಂಗಳೂರು: ಲೋಕಸಭೆಯಲ್ಲಿ 2019ರಿಂದಲೂ ಉಪ ಸಭಾಧ್ಯಕ್ಷರ ಹುದ್ದೆ ಖಾಲಿ ಇದ್ದು, ಇದು ಸಂವಿಧಾನದ 93ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಸಂಸದ ಸಾಗರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಸತ್ತಿನ ಕೆಳಮನೆ ಸಾಂವಿಧಾನಿಕವಾಗಿ, ಪ್ರಜಾಪ್ರಭತ್ವದ ತತ್ವದಲ್ಲಿ ನಡೆಯಬೇಕು. ಆದರೆ ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆ ತಳೆದಿದೆ ಎಂದು ದೂರಿದ್ದಾರೆ.


ಸಂಸತ್ತು ಪ್ರಜಾಸತ್ತಾತ್ಮಕವಾಗಿ ನಡೆಯಬೇಕಾದರೆ, ಎಲ್ಲ ಜನಪ್ರತಿನಿಧಿಗಳಿಗೂ ಪಕ್ಷಭೇದವಿಲ್ಲದೆ ಸಮಾನ ಅವಕಾಶ ದೊರಕಬೇಕು. ಸದಸ್ಯರು ಸಾಂವಿಧಾನಿಕ ಕರ್ತವ್ಯ ನಿಭಾಯಿಸುವಂತಹ ವಾತಾವರಣ ಇರಬೇಕು, ಆದರೆ ಇತ್ತೀಚಿನ ಕೆಲವು ಪ್ರವೃತ್ತಿಗಳು ಈ ವ್ಯವಸ್ಥೆಯ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿವೆ, ಪ್ರಜಾಪ್ರಭುತ್ವದ ಮೂಲ ತತ್ವಗಳನ್ನೇ ಅಪಹಾಸ್ಯ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಸದನದಲ್ಲಿ ಪ್ರತಿಪಕ್ಷದ ಸದಸ್ಯರಿಗೆ ಮಾತನಾಡಲು ಸೂಕ್ತ ಅವಕಾಶ ಕಲ್ಪಿಸದೆ, ಅವರ ಹಕ್ಕನ್ನೇ ಮೊಟಕುಗೊಳಿಸಲಾಗುತ್ತಿದೆ. ಇದು ಸಂಸದೀಯ ಕಲಾಪದ ಚರ್ಚೆಯ ಸ್ವರೂಪವನ್ನು ದುರ್ಬಲಗೊಳಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top