ಮೊನಾಲಿಸಾಗೆ ಸಿನಿಮಾ ಆಫರ್ ನೀಡಿದ್ದ ನಿರ್ದೇಶಕ ‘ಸನೋಜ್ ಮಿಶ್ರಾ’ ಅರೆಸ್ಟ್.!

(ನ್ಯೂಸ್ ಕಡಬ) newskadaba.com , ಏ.01: ಮುಂಬೈ: ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ದೆಹಲಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಯುವತಿಯೊಬ್ಬಳ ಮೇಲೆ ಅತ್ಯಾಚಾರ ಆರೋಪ ಹೊತ್ತಿರುವ ಅವರ ವಿರುದ್ಧ ದೆಹಲಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಂತ್ರಸ್ತೆ, 2020ರಲ್ಲಿ ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಮಿಶ್ರಾ ಅವರನ್ನು ಪರಿಚಯಿಸಿಕೊಂಡಿದ್ದಾಳೆ. ಅವರ ಮೇಲೆ ಪದೇ ಪದೇ ಶೋಷಣೆ ನಡೆಸಿ ಸುಳ್ಳು ಭರವಸೆಗಳೊಂದಿಗೆ ಆಮಿಷವೊಡ್ಡಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪದ ವಿವರಗಳು ಸಂತ್ರಸ್ತೆಯ ಪ್ರಕಾರ, 2021ರ ಜೂನ್ 17 ರಂದು ಮಿಶ್ರಾ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಇದ್ದ ಬಗ್ಗೆ ಕರೆ ಮಾಡಿ, ಆಕೆಗೆ ಆತ್ಮಹತ್ಯೆಯ ಬೆದರಿಕೆ ಹಾಕಿದ್ಧರು. ಇದರಿಂದ ಭಯಗೊಂಡ ಯುವತಿ ಅವರನ್ನು ಭೇಟಿಯಾಗಲು ಒಪ್ಪಿಕೊಂಡಳು. ಜೂನ್ 18, 2021 ರಂದು ಮಿಶ್ರಾ ಆಕೆಯನ್ನು ರೆಸಾರ್ಟ್ಗೆ ಕರೆದೊಯ್ದು, ಮಾದಕವಸ್ತುಗಳನ್ನು ನೀಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಅಲ್ಲದೇ, ಅಶ್ಲೀಲ ವೀಡಿಯೋ ರೆಕಾರ್ಡ್ ಮಾಡಿ ಅವುಗಳನ್ನು ಸೋರಿಕೆ ಮಾಡುವುದಾಗಿ ಬೆದರಿಸಿದ್ದಾರೆ. ಸಿನಿಮಾ ತಾರೆಯ ಭರವಸೆ ಮತ್ತು ಸುಳ್ಳು ಮಾತುಗಳು ಮಿಶ್ರಾ ಸಂತ್ರಸ್ತೆಗೆ ಮದುವೆಯ ಭರವಸೆ ನೀಡಿದಂತೆಯೇ, ಚಲನಚಿತ್ರ ಕ್ಷೇತ್ರದಲ್ಲಿ ಅವಕಾಶ ನೀಡುವ ಮಾತುಗಳನ್ನೂ ನೀಡಿದ್ದಾರೆ. ಆದರೆ, ಪ್ರತಿಯಾಗಿ ಆಕೆಯನ್ನು ಹಲವು ಬಾರಿ ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆಕೆಯ ದೂರಿನಲ್ಲಿದೆ.

Also Read  ಬಸ್ಸು ಮತ್ತು ಗೋಡೆ ಮಧ್ಯೆ ಸಿಲುಕಿ ನಿರ್ವಾಹಕ ಮೃತ್ಯು..!

ಸನೋಜ್ ಮಿಶ್ರಾ ಮತ್ತು ಮೊನಾಲಿಸಾ ವಿವಾದ 2025ರ ಮಹಾ ಕುಂಭಮೇಳದ ವೇಳೆ, ರುದ್ರಾಕ್ಷಿ ಮಾರಾಟ ಮಾಡುವ ಮೊನಾಲಿಸಾ ಎಂಬ ಯುವತಿಗೆ ಮಿಶ್ರಾ ಚಲನಚಿತ್ರದ ಆಫರ್ ನೀಡಿದ ವಿಚಾರವೊಂದು ಸುದ್ದಿಯಾಗಿತ್ತು. ಈ ಘಟನೆಯ ಬಳಿಕ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, ಈ ಬಾರಿ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆಯನ್ನು ಮುಂದುವರಿಸುತ್ತಿದ್ದಾರೆ.

error: Content is protected !!
Scroll to Top