ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ(ರಿ) ಪುತ್ತೂರು ಘಟಕ ಇದರ ಆರನೆ ಮಾಸಿಕ ಸಹಾಯಹಸ್ತ

(ನ್ಯೂಸ್ ಕಡಬ) newskadaba.com ಸವಣೂರು, ಮಾ.31. ಉದಯ ಪೂಜಾರಿ ಸಾರಥ್ಯದ ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ(ರಿ) ಪುತ್ತೂರು ಘಟಕ ಇದರ ಆರನೆ ಮಾಸಿಕ ಸಹಾಯಹಸ್ತವನ್ನು ಮಾ.31 ರಂದು ಕಡಬ ನೂಜಿಬಾಳ್ತಿಲ ನಿವಾಸಿಯಾದ ಶ್ರೀಮತಿ ಜಯಂತಿಯವರ ಮಗಳ ಮದುವೆಗೆ ಧನ ಸಹಾಯವನ್ನು ನೀಡಲಾಯಿತು.

ಬಡ ಕುಟುಂಬವಾದ ಇವರು ತಮ್ಮ ಆರ್ಥಿಕ ಮಗ್ಗಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದು ಬಿರುವೆರ್ ಕುಡ್ಲ ಪುತ್ತೂರು ಘಟಕಕ್ಕೆ ತಮ್ಮ ಪರಿಸ್ಥಿತಿಯನ್ನು ವಿವರಿಸಿ ಅರ್ಜಿಯನ್ನು ಸಲ್ಲಿಸದ ಪರಿಣಾಮವಾಗಿ ಪುತ್ತೂರು ಘಟಕ ಸಭೆಯಲ್ಲಿ ಸಹಾಯ ನೀಡುವುದೆಂದು ತೀರ್ಮಾನಿಸಿ ಆ ಪ್ರಯುಕ್ತ ಅವರ ಮನೆ ಭೇಟಿ ಮಾಡಿ ಜಿಲ್ಲಾ ಎಂಡೋಸಲ್ಪಾನ್ ಸಹಕಾರಿ ಸಂಘ ಇದರ ಅಧ್ಯಕ್ಷರು, ಪೆರಾಬೆ ಗ್ರಾಮ ಪಂಚಾಯತ್ ಸದಸ್ಯರು, ಬಿರುವೆರ್ ಕುಡ್ಲ ಪುತ್ತೂರು ಘಟಕದ ಸದಸ್ಯರು ಆದ ಶ್ರೀಮತಿ ಗಂಗಾರತ್ನ ವಸಂತ್ ಇವರು ಸಹಾಯಧನ ಚೆಕ್ಕ್ ಅನ್ನು ಫಲಾನುಭವಿಯ ತಂದೆ ತಾಯಿಗೆ ಹಸ್ತಾಂತರಿಸಿದರು. ಈ ಸಮಯದಲ್ಲಿ ಬಿರುವೆರ್ ಕುಡ್ಲ ಪುತ್ತೂರು ಘಟಕದ  ಅಧ್ಯಕ್ಷರಾದ ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ, ಉಪಾಧ್ಯಕ್ಷರಾದ ಡಾ! ಪ್ರವೀಣ್ ಸರ್ವೆದೋಲ ಗುತ್ತು, ಪ್ರಧಾನ ಕಾರ್ಯದರ್ಶಿ ತೇಜು ಬಿರ್ವ ಕೇಪುಲು, ಸಂಫಟನಾ ಕಾರ್ಯದರ್ಶಿ ಕಮಲೇಶ್ ಸರ್ವೆದೋಲ ಗುತ್ತು ಇವರು ಉಪಸ್ಥಿತರಿದ್ದರು.

Also Read  ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

error: Content is protected !!
Scroll to Top