(ನ್ಯೂಸ್ ಕಡಬ) newskadaba.com , ಏ.01: ದೇಶದಲ್ಲಿ ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಗಳ ಬೆಲೆಯಲ್ಲಿ 41 ರೂಪಾಯಿ ಇಳಿಕೆ ಮಾಡಿದೆ.
ಪರಿಷ್ಕೃತ ದರದ ಪ್ರಕಾರ, ದೆಹಲಿಯಲ್ಲಿ 19ಕೆಜಿ ಸಿಲಿಂಡರ್ ಬೆಲೆ ಈಗ 1762 ರೂ. ಆಗಿದೆ. ಮುಂಬೈ ನಗರದಲ್ಲಿ 1714.50 ರೂ. ಮತ್ತು ಚೆನ್ನೈ ನಲ್ಲಿ 1924 ರೂ. ಆಗಿದೆ.
ತೈಲ ಕಂಪನಿಗಳು ಪ್ರತೀ ತಿಂಗಳ ಮೊದಲ ದಿನ ದೇಶದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ಪರಿಷ್ಕರಣೆ ಮಾಡುತ್ತದೆ. ಸದ್ಯಕ್ಕೆ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಇಳಿಕೆ ಆಗಿಲ್ಲ.