12 ನೇ ತರಗತಿ ಲೆಕ್ಕಶಾಸ್ತ್ರ ಪರೀಕ್ಷೆ; ಬೇಸಿಕ್‌ ಕ್ಯಾಲ್ಕುಲೇಟರ್‌ ಅನುಮತಿಗೆ ಪ್ರಸ್ತಾಪ

(ನ್ಯೂಸ್ ಕಡಬ) newskadaba.com, ಮಾ. 25: ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) ಆಡಳಿತ ಮಂಡಳಿಯು 2025-26ನೇ ಶೈಕ್ಷಣಿಕ ಅವಧಿಯಿಂದ 12ನೇ ತರಗತಿಯ ಲೆಕ್ಕಶಾಸ್ತ್ರ ಪರೀಕ್ಷೆಯಲ್ಲಿ ಬೇಸಿಕ್‌ ಕ್ಯಾಲ್ಕುಲೇಟರ್‌ಗಳನ್ನು ಬಳಸಲು ಅನುಮತಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಸಿಬಿಎಸ್‌ಇಯ 140 ನೇ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರಗಳನ್ನು ಅನುಮೋದಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರೋಗ್ರಾಮೆಬಲ್ ಅಲ್ಲದ ಕ್ಯಾಲ್ಕುಲೇಟರ್‌ಗಳನ್ನು ಅನುಮತಿಸಲಾಗುವುದು, ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮತ್ತು ಶೇಕಡಾವಾರು ಲೆಕ್ಕಾಚಾರಗಳಂತಹ ಗಣಿತವನ್ನು ಮಾಡಲು ಮಾತ್ರ ಇದು ಸೀಮಿತವಾಗಿರುತ್ತದೆ ಎಂದು ಅನುಮೋದನೆಯಲ್ಲಿ ತಿಳಿಸಲಾಗಿದೆ.

Also Read  ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ➤ 10. ಕೋಟಿ ದಂಡ ಕಟ್ಟಿದ ಶಶಿಕಲಾ

“ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸುಧಾರಿತ ಅಥವಾ ಪ್ರೋಗ್ರಾಮೆಬಲ್ ಸಾಧನಗಳ ಬಳಕೆಯನ್ನು ತಡೆಯಲು ಕ್ಯಾಲ್ಕುಲೇಟರ್‌ಗಳ ಮಾದರಿಗಳ ಕುರಿತು ಸ್ವಷ್ಟ ಮಾರ್ಗಸೂಚಿಗಳನ್ನು ನೀಡಲು ಸಮಿತಿ ರಚನೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕ್ರಮದಿಂದ ವಿದ್ಯಾರ್ಥಿಗಳು ವಿಶ್ಲೇಷಣಾತ್ಮಕ ಮತ್ತು ಕೇಸ್‌ ಸ್ಟಡಿಗಳಂತಹ ಪ್ರಶ್ನೆಗಳಿಗೆ ಹೆಚ್ಚು ಸಮಯ ವಿನಿಯೋಗಿಸಲು ಸಾಧ್ಯವಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.

error: Content is protected !!
Scroll to Top