(ನ್ಯೂಸ್ ಕಡಬ) newskadaba.com, ಮಾ. 25: ದೆಹಲಿಯಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಸರ್ಕಾರವು 26 ವರ್ಷಗಳ ಬಳಿಕ ದೆಹಲಿ ವಿಧಾನಸಭೆಯಲ್ಲಿ ತನ್ನ ಮೊದಲ ಬಜೆಟ್ ಮಂಡಿಸಿದೆ.


ದೆಹಲಿ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವೆ ರೇಖಾ ಗುಪ್ತಾ 2025-26 (FY26) ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಅರ್ಹ ಮಹಿಳೆಯರಿಗೆ ತಿಂಗಳಿಗೆ 2,500 ಪಾವತಿಸಲು ಸರ್ಕಾರ 5,100 ಕೋಟಿ ಹಣವನ್ನು ನಿಗದಿಪಡಿಸಿದೆ. ದೆಹಲಿಯ ಈ ಬಾರಿಯ ಬಜೆಟ್ 2025 ಹಿಂದಿನ ಬಜೆಟ್‌ಗಿಂತ ಶೇ. 31.5 ರಷ್ಟು ಹೆಚ್ಚಳ ಕಂಡಿದೆ. FY26 ರ ಬಂಡವಾಳ ವೆಚ್ಚವನ್ನು ದ್ವಿಗುಣಗೊಳಿಸಿ 28,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ 2,144 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಸಿಎಂ ಗುಪ್ತಾ ಹೇಳಿದ್ದಾರೆ.