(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ. 22. ಸುನ್ನೀ ಯುವಜನ ಸಂಘ SYS ತೆಕ್ಕಾರು ವತಿಯಿಂದ ಬೃಹತ್ ಇಫ್ತಾರ್ ಮೀಟ್ ಇಂದು ತೆಕ್ಕಾರು ಮಸೀದಿ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.
ಓರ್ವ ಉಪವಾಸಿಗನಿಗೆ ಇಫ್ತಾರ್ ಕೂಟ ಏರ್ಪಡಿಸುವುದು ಇಸ್ಲಾಮಿನಲ್ಲಿ ಮಹತ್ವದ ಕಾರ್ಯವಾಗಿದ್ದು, ಈ ನಿಟ್ಟಿನಲ್ಲಿ SYSನ ಈ ಕಾರ್ಯ ಮಹತ್ವದ್ದಾಗಿದೆ ಎಂದು ತೆಕ್ಕಾರು ಕೇಂದ್ರ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಮಜೀದ್ ಸಖಾಫಿ ಇಫ್ತಾರ್ ಕೂಟಕ್ಕೆ ನೇತೃತ್ವ ನೀಡಿ ಶುಭ ಹಾರೈಸಿದರು. ನೂರಾರು ಮುಸ್ಲಿಂ ಭಾಂದವರು ಪವಿತ್ರ ಇಫ್ತಾರ್ ಕೂಟದಲ್ಲಿ ಬಾಗವಹಿಸಿದರು. ಆಗಮಿಸಿದ ಎಲ್ಲರಿಗೂ SYS ತೆಕ್ಕಾರು ಯುನಿಟ್ ಕಾರ್ಯಕರ್ತರು ಉತ್ತಮ ವ್ಯವಸ್ಥೆಯನ್ನು ಏರ್ಪಡಿಸಿ ಪ್ರಶಂಸೆಗೆ ಪಾತ್ರರಾದರು.