(ನ್ಯೂಸ್ ಕಡಬ) newskadaba.com ಮಾ. 22: ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಭಯ ಜಿಲ್ಲೆಗಳಲ್ಲಿ ಬಂದ್ ಯಾವುದೇ ಪರಿಣಾಮವನ್ನು ಬೀರದೇ ಎಂದಿನಂತೆ ಜನಜೀವನ ಯಾವುದೇ ಅಡಚಣೆಯಿಲ್ಲದೆ ಮುಂದುವರೆಯಿತು.


ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಎಂದಿನಂತೆ ಸಂಚರಿಸಿದವು. ಆಟೋರಿಕ್ಷಾಗಳು ಮತ್ತು ಕ್ಯಾಬ್‌ಗಳು ಸೇವೆಯಲ್ಲಿವೆ. ಅಂಗಡಿಗಳು, ಮಾರುಕಟ್ಟೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಿದವು. ಯಾವುದೇ ಅಂಗಡಿಗಳು, ಸಂಸ್ಥೆಗಳು ಮುಚ್ಚಿರುವ ಬಗ್ಗೆ ವರದಿಯಾಗಿಲ್ಲ.