(ನ್ಯೂಸ್ ಕಡಬ) newskadaba.com ಮಾ. 21 : ಬೆಂಗಳೂರು: ಕೇಂದ್ರದಲ್ಲಿ ನರೇಂದ್ರಮೋದಿಯವರ ಆಡಳಿತ ಜಾರಿಗೆ ಬಂದ ಬಳಿಕ ರಾಜ್ಯಗಳ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. 2013ರಿಂದ 2017ರವರೆಗೆ ನಾಲ್ಕು ರಾಜ್ಯಗಳ ವಿತ್ತೀಯ ಕೊರತೆ ಶೇ.3ಕ್ಕಿಂತ ಹೆಚ್ಚಿದ್ದು, ಐದು ರಾಜ್ಯಗಳು ಜಿ ಎಸ್ ಡಿ ಪಿಯ ಮಿತಿಗಾಗಿ ಶೇ.25ಕ್ಕಿಂತಲೂ ಹೆಚ್ಚಿನ ಸಾಲ ಹೊಂದಿದ್ದವು. ಆದರೆ ವಿತ್ತೀಯ ಕೊರತೆ ಆರಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಬಾಧಿಸುತ್ತಿದೆ. 14 ಪ್ರಮುಖ ರಾಜ್ಯಗಳ ಪೈಕಿ 10 ರಾಜ್ಯಗಳು ಮಿತಿ ಮೀರಿದ ಸಾಲಕ್ಕೆ ಸಿಲುಕಿವೆ.

ಮನಮೋಹನ್ ಸಿಂಗ್ ಸರ್ಕಾರ ನಿರ್ಗಮಿಸುವ ವೇಳೆಗೆ ಎಲ್ಲಾ ರಾಜ್ಯಗಳ ಒಟ್ಟು ಸಾಲ 25.1 ಲಕ್ಷ ಕೋಟಿಯಷ್ಟಿತ್ತು. 2024ರ ಮಾರ್ಚ್ ಅಂತ್ಯಕ್ಕೆ 83.32 ಕೋಟಿಯಷ್ಟಾಗಲಿದೆ. ಈ ವರ್ಷದ ಕೊನೆಗೆ 100 ಲಕ್ಷ ಕೋಟಿ ದಾಟುವ ಅಂದಾಜಿದೆ. ಕೇಂದ್ರ ಸರ್ಕಾರದ ಬಜೆಟ್ 53.11 ಲಕ್ಷ ಕೋಟಿಗಳಿಂದ 216 ಲಕ್ಷ ಕೋಟಿಗೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.