ನಾಳೆ ಕರ್ನಾಟಕ ಬಂದ್‌ ಖಚಿತ

(ನ್ಯೂಸ್ ಕಡಬ) newskadaba.com ಮಾ. 21 : ಬೆಂಗಳೂರು: ಕನ್ನಡ ಪರ ಸಂಘಟನೆಗಳು ಮಾರ್ಚ್​ 22ರಂದು ಕರ್ನಾಟಕ ಬಂದ್​ಗೆ ಕರೆ ನೀಡಿದ್ದು, ಸಾರಿಗೆ ಸಂಸ್ಥೆಗಳು ಸೇರಿ ಹಲವರು ಬೆಂಬಲ ಸೂಚಿಸಿರುವುದರಿಂದ, ನಾಳೆ ಬಂದ್‌ ಬಹುತೇಕ ಯಶಸ್ವಿಯಾಗುವುದು ಖಚಿತವಾಗಿದೆ. ಬೆಳಗಾವಿ ಗಡಿಯಲ್ಲಿ ಮರಾಠಿ ಪುಂಡರ ಹಾವಳಿ ವಿರೋಧಿಸಿ ಹಾಗೂ ರಾಜ್ಯದ ಹಿತಾಸಕ್ತಿ ಸಂಬಂಧಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಬಂದ್ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ.

ಶಾಲಾ ಕಾಲೇಜು ನಡೆಸುವ ಹಾಗೂ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿ ಸರ್ಕಾರದಿಂದ ಇನ್ನಷ್ಟೇ ಅಧಿಕೃತ ನಿರ್ಧಾರ ಪ್ರಕಟಗೊಳ್ಳಬೇಕಿದೆ. ಶಿಕ್ಷಣ ಸಚಿವರು ತಿಳಿಸಿರುವಂತೆ, ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶೆಡ್ಯೂಲ್‌ ಇಲ್ಲವಾದ್ದರಿಂದ ಆ ಕುರಿತು ಆತಂಕ ಬೇಕಿಲ್ಲ. ಬಂದ್‌ಗೆ ಸರ್ಕಾರದ ಬೆಂಬಲವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಖಚಿತಪಡಿಸಿದ್ದಾರೆ.

error: Content is protected !!
Scroll to Top