(ನ್ಯೂಸ್ ಕಡಬ) newskadaba.com ಕಡಬ, ಮಾ.21. ಅಪರಿಚಿತ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳ ಓಂತ್ರಡ್ಕ ಶಾಲೆಯ ಸಮೀಪ ಶುಕ್ರವಾರ ಅಪರಾಹ್ನ ಸಂಭವಿಸಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಮೈಸೂರು ಮೂಲದವನೆಂದು ಗುರುತಿಸಲಾಗಿದ್ದು, ಆತ ಓಂತ್ರಡ್ಕ ಶಾಲೆಯ ಸಮೀಪ ಕಾರನ್ನು ನಿಲ್ಲಿಸಿ ವಿಷ ಸೇವಿಸಿದ್ದು, ಆ ಬಳಿಕ ತನ್ನ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದ ಎನ್ನಲಾಗಿದೆ. ವಾಂತಿ ಮಾಡುವುದನ್ನು ಕಂಡ ಸ್ಥಳೀಯರು 112 ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ಕಳುಹಿಸಿಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.