ಮಂಗಳೂರು : ಶನಿವಾರದ ಬಸ್ ಬಂದ್ ಗೆ ಸ್ಪಂದಿಸಲ್ಲ – ಕೆನರಾ, ದ.ಕ. ಬಸ್ ಮಾಲಕರ ಸಂಘ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಾ. 21 : ಬೆಳಗಾವಿಯಲ್ಲಿ ಮರಾಠಿಗರ ಪುಂಡಾಡಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ಕನ್ನಡ ಪರ ಸಂಘಟನೆಗಳು ಮಾ.2 ರಂದು ರಾಜ್ಯ ಬಂದ್ ಗೆ ನೀಡಿರುವ ಕರೆಗೆ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘ ಸ್ಪಂದಿಸುವುದಿಲ್ಲ ಎಂದು ತಿಳಿಸಿದೆ.

ಎಲ್ಲ ಸಂಘಟನೆಗಳ ಬೇಡಿಕೆಗೆ ನಮ್ಮ ಸಹಮತ, ಸಹಾನುಭೂತಿ ಇದೆ. ಬಸ್ ಮಾಲಕರು ಕೂಡ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಶನಿವಾರ ಬಸ್ ಬಂದ್ ಮಾಡುವುದಿಲ್ಲ. ಇತರ ಸಾಮಾನ್ಯ ದಿನಗಳಂತೆ‌ ಬಸ್ ಗಳು ಓಡಾಡಲಿವೆ.

Also Read  7ನೇ ವೇತನ ಆಯೋಗ ಜಾರಿಗೆ ಬದ್ಧ ಎಂದ ಬೊಮ್ಮಾಯಿ ➤ ಪ್ರತಿಭಟನೆ ನಿಲ್ಲಿಸ್ತಾರಾ ಸರ್ಕಾರಿ ನೌಕರರು ?

ಸಾವರ್ಜನಿಕರ ಹಿತದೃಷ್ಟಿ, ಮುಖ್ಯವಾಗಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಸ್ ಬಂದ್ ಮಾಡುವುದಿಲ್ಲ ಎಂದು ದ.ಕ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಜ್ ಪರ್ತಿಪಾಡಿ ತಿಳಿಸಿದ್ದಾರೆ.

error: Content is protected !!
Scroll to Top