ವೆನ್ಲಾಕ್: ತಜ್ಞ ವೈದ್ಯಾಧಿಕಾರಿಗಳ ನೇಮಕಾತಿಗೆ ಆಹ್ವಾನ

(ನ್ಯೂಸ್ ಕಡಬ) newskadaba.com ಮಾ. 21 ಮಂಗಳೂರು: ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಡಿಎನ್‌ಬಿ ಹಾಗೂ ಡಿಆರ್‌ಎನ್‌ಬಿ ಕೋರ್ಸ್‌ಗಳು ನಡೆಯುತ್ತಿದೆ. ಡಿಎನ್‌ಬಿ ಕೋರ್ಸ್‌ನ ಇಮ್ಯುನೊ ಹೆಮಟಾಲಜಿ ಮತ್ತು ಟ್ರಾನ್ಸ್‌ಫ್ಯೂಶನ್ ಮೆಡಿಸಿನ್ ವಿಭಾಗಕ್ಕೆ ಜೂನಿಯರ್ ಕನ್ಸಲ್ಟೆಂಟ್ ಹುದ್ದೆಗೆ ಹಾಗೂ ಡಿಆರ್‌ಎನ್‌ಬಿ ಕೋರ್ಸ್‌ನ ಯುರಾಲಜಿ ವಿಭಾಗಕ್ಕೆ ಜೂನಿಯರ್ ಕನ್ಸಲ್ಟೆಂಟ್ 1 ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ತಜ್ಞರು ವೈದ್ಯರುಗಳು/ಅಭ್ಯರ್ಥಿಗಳು ಸಂಬಂಧಿಸಿದ ಅಗತ್ಯವಾದ ಮೂಲ ದಾಖಲಾತಿಗಳೊಂದಿಗೆ ಮಾ.25ರಂದು ಪೂ.11ಕ್ಕೆ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವೆನ್ಲಾಕ್ ಆಸ್ಪತ್ರೆತ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top