(ನ್ಯೂಸ್ ಕಡಬ) newskadaba.com ಮಾ. 20 ಪುತ್ತೂರು: ಪುತ್ತೂರಿನ ಪ್ರಭು ಚರುಂಬುರಿ ಮಾಲಕ ಕೆಮ್ಮಾಯಿ ದಾರಂದಕುಕ್ಕು ನಿವಾಸಿ ಸುಧಾಕರ ಪ್ರಭು(42) ಇಂದು ಬೆಳಿಗ್ಗೆ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರ ಮನೆಯಲ್ಲಿ ಮುಂದಿನ ವಾರ ನೇಮೋತ್ಸವ ನಡೆಯಲಿದ್ದು ಅದರ ಪೂರ್ವ ತಯಾರಿಯಲ್ಲಿ ತೊಡಗಿದ್ದರು. ಆದರೆ ಇಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಇವರ ಈ ನಿರ್ಧಾರದಿಂದ ಕುಟುಂಬದವರು ಮತ್ತು ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ