ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಬಳಕೆದಾರರಿಗೆ ಸೂಚನೆ – ಏ.1ರಿಂದ ಮೊಬೈಲ್ ಸಂಖ್ಯೆಗಳಲ್ಲಿ ಯುಪಿಐ ಪಾವತಿ ಸಮಸ್ಯೆ

(ನ್ಯೂಸ್ ಕಡಬ) newskadaba.com ಮಾ. 20 ಬೆಂಗಳೂರು: ಜನಪ್ರಿಯ ಯುಪಿಐ ಪಾವತಿ ಆ್ಯಪ್‌ಗಳಾದ ಗೂಗಲ್ ಪೇ, ಫೋನ್‌ಪೇ ಮತ್ತು ಪೇಟಿಎಂ ಬಳಕೆದಾರರು ಇದೇ ಏ.1ರಿಂದ ಕೆಲವು ಮೊಬೈಲ್ ಸಂಖ್ಯೆಗಳಲ್ಲಿ ಯುಪಿಐ (UPI) ಪಾವತಿ ಮಾಡುವಾಗ ಸಮಸ್ಯೆ ಎದುರಾಗಬಹುದು ಎಂದು ತಿಳಿದು ಬಂದಿದೆ.

ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬ್ಯಾಂಕ್‌ಗಳು ಮತ್ತು ಯುಪಿಐ ಅಪ್ಲಿಕೇಶನ್‌ಗಳಿಗೆ “ನಿಷ್ಕ್ರಿಯ ಮೊಬೈಲ್ ಸಂಖ್ಯೆ”ಗಳನ್ನು ತಮ್ಮ ವ್ಯವಸ್ಥೆಯಿಂದ ತೆಗೆದುಹಾಕಲು ಸೂಚನೆ ನೀಡಿದೆ.

ದೀರ್ಘಕಾಲದಿಂದ ಸಕ್ರಿಯವಾಗಿಲ್ಲದ ಮೊಬೈಲ್ ಸಂಖ್ಯೆಗಳನ್ನು ಯುಪಿಐಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಂದ ತೆಗೆದುಹಾಕಬೇಕು ಎಂದು ಹೇಳಿದೆ.ಈ ನಿರ್ಧಾರದಿಂದಾಗಿ ಏ.1 ರಿಂದ ಅಂತಹ ಮೊಬೈಲ್ ಸಂಖ್ಯೆಗಳ ಮೂಲಕ ಯುಪಿಐ ಪಾವತಿಗಳು ಸ್ಥಗಿತಗೊಳ್ಳಲಿವೆ. ಸೈಬರ್ ಕ್ರೈಂಗಳ ಹೆಚ್ಚಳ ಮತ್ತು ತಾಂತ್ರಿಕ ದೋಷಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎನ್‌ಪಿಸಿಐ ತಿಳಿಸಿದೆ.

error: Content is protected !!
Scroll to Top