(ನ್ಯೂಸ್ ಕಡಬ) newskadaba.com ಮಾ. 20 ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಹಾಗೂ ಮಾಡೆಲ್ ಆಗಿರುವ ಶರಣ್ಯ ಶೆಟ್ಟಿ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ನಟಿಯ ಗಮನಕ್ಕೆ ಬಂದಿದ್ದು ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕ್ಲಾರಿಟಿ ಕೊಟ್ಟಿದ್ದಾರೆ. ಹಣದ ವಂಚನೆ ಮಾಡುತ್ತಿರುವವರು ದೂರು ನೀಡಲು ಮುಂದಾಗಿದ್ದಾರೆ.

ಹೌದು! ನಟಿ ಶರಣ್ಯಾ ಶೆಟ್ಟಿ ಹೆಸರನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ವಾಟ್ಸಪ್‌ನಲ್ಲಿ ವಂಚನೆ ಮಾಡುತ್ತಿದ್ದಾರೆ. ಶರಣ್ಯ ಶೆಟ್ಟಿಯಾದ ನಾನು ನಿಮ್ಮೊಟ್ಟಿಗೆ ಕೊಲಾಬೋರೇಷನ್ ( ಪ್ರಮೋಷನ್) ಮಾಡಿ ಕೊಡುತ್ತೀನಿ ಇಂತಿಷ್ಟು ಅಂತ ಹಣ ಕೊಡಬೇಕು ಎಂದು ಮೆಸೇಜ್ ಮಾಡಲಾಗಿತ್ತು. ನಿಜಕ್ಕೂ ಇದು ಶರಣ್ಯ ಶೆಟ್ಟಿನೇ ಅಂದುಕೊಂಡು ಅಮಾಯಕರು ಎಷ್ಟು ಹಣ ಕಳುಹಿಸಬೇಕು ಎಂದು ಕೇಳಿಕೊಂಡು ಆನ್‌ಲೈನ್ ಪೇಮೆಂಟ್ ಮಾಡಿಬಿಟ್ಟಿದ್ದಾರೆ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಶರಣ್ಯ ಗಮನಕ್ಕೆ ಬಂದಿದೆ. ಹೀಗಾಗಿ ಖದೀಮರ ವಂಚನೆ ಫೋಟೋ ಸಮೇತ ಸ್ಪಷ್ಟನೆ ನೀಡಿದ್ದಾರೆ.