ನಕಲಿ ದಾಖಲೆ ತಡೆಗೆ ವರ್ಷದೊಳಗೆ ‘ಲ್ಯಾಂಡ್ ಬೀಟ್ ವ್ಯವಸ್ಥೆ’ ಜಾರಿ: ರಾಜ್ಯ ಸರ್ಕಾರ

(ನ್ಯೂಸ್ ಕಡಬ) newskadaba.com ಮಾ. 20: ಬೆಂಗಳೂರು: ನಕಲಿ ದಾಖಲೆ ತಡೆಯಲು ವರ್ಷದೊಳಗೆ ‘ಲ್ಯಾಂಡ್ ಬೀಟ್ ವ್ಯವಸ್ಥೆ’ ಜಾರಿಗೆ ತರಲಾಗುವುದು ಎಂದು ರಾಜ್ಯ ಸರ್ಕಾರ ಬುಧವಾರ ಹೇಳಿದೆ.

ಪರಿಷತ್ತಿನಲ್ಲಿ ಬುಧವಾರ ಜೆಡಿಎಸ್ ಎಂಎಲ್‌ಸಿ ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೇರೈಗೌಡ ಅವರು, ಸರ್ಕಾರಿ ಅಧಿಕಾರಿಗಳ ಜೊತೆ ಶಾಮೀಲಾಗಿರುವ ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಕಬಳಿಸುತ್ತಿದ್ದಾರೆಂದು. ಇದನ್ನು ತಡೆಯಲು .ವರ್ಷದೊಳಗೆ ‘ಲ್ಯಾಂಡ್ ಬೀಟ್ ವ್ಯವಸ್ಥೆ’ ಜಾರಿಗೆ ತರಲಾಗುವುದು ಎಂದು ಹೇಳಿದರು. ಕೆಲವು ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಕೆಲವರು ನಕಲಿ ಭೂ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಈ ಅಧಿಕಾರಿಗಳು ಅತಿಕ್ರಮಣ ಪ್ರಕರಣಗಳಿಗೆ ಸಂಬಂಧಿಸಿದ ನ್ಯಾಯಾಲಯದ ನೋಟೀಸ್‌ಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಪ್ರಕರಣಗಳು ನ್ಯಾಯಾಲಯ ನಿಂದನೆಗೆ ಆಹ್ವಾನ ನೀಡುವ ಹಂತ ತಲುಪಿದ ನಂತರ ಎಚ್ಚರಗೊಂಡಿರುವಂತೆ ನಟಿಸುತ್ತಾರೆಂದು ಹೇಳಿದರು.

Also Read  ಆತ್ಮಹತ್ಯೆಗೆ ಶರಣಾಗಿದ್ದ ವಿದ್ಯಾರ್ಥಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ..!

ಈ ವೇಳೆ ಶರವಣ ಅವರು ಇದನ್ನು ತಡೆಯಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಅಧಿಕಾರಿಗಳ ಇಂತಹ ಅನೈತಿಕ ಕೃತ್ಯಗಳನ್ನು ಸಹಿಸಲಾಗುವುದಿಲ್ಲ. ನ್ಯಾಯಾಲಯದಲ್ಲಿನ ಹೋರಾಟದಲ್ಲಿ ಗೆಲ್ಲಲು ಮತ್ತು ಅತಿಕ್ರಮಣಗೊಂಡ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲು ಸಹಾಯ ಮಾಡುವ ಕಾನೂನುಗಳನ್ನು ತರಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

error: Content is protected !!
Scroll to Top