ಆಸ್ತಿ ತೆರಿಗೆ: ಸರ್ಕಾರಿ ಕಟ್ಟಡಕ್ಕೂ OTS ಯೋಜನೆ ಜಾರಿ

(ನ್ಯೂಸ್ ಕಡಬ) newskadaba.com ಮಾ. 18 ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಟ್ಟಡಗಳು ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒನ್-ಟೈಮ್ ಸೆಟ್ಲ್‌ಮೆಂಟ್ (OTS) ಯೋಜನೆಯನ್ನು ಘೋಷಿಸಿದೆ.

ಈ ಹಿಂದೆ, OTS ಯೋಜನೆ ಎಲ್ಲರಿಗೂ ಮುಕ್ತವಾಗಿತ್ತು, ಆದರೆ, ವಿಧಾನಸೌಧ, ವಿಕಾಸಸೌಧ ಮತ್ತು ಇತರ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಟ್ಟಡಗಳು ಯೋಜನೆ ಬಳಸಿಕೊಳ್ಳುವಲ್ಲಿ ವಿಫಲವಾಗಿತ್ತು. ಇದರಿಂದ ಕೋಟಿಗಟ್ಟಲೆ ಆಸ್ತಿ ತೆರಿಗೆ ಮತ್ತು ಸೇವಾ ಶುಲ್ಕಗಳನ್ನು ಬಾಕಿ ಉಳಿದಿವೆ.

Also Read  ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ➤ ರಸ್ತೆಯಲ್ಲಿ ಕೆಟ್ಟುನಿಂತ ಆರ್‌ಬಿಐಯ ಟ್ರಕ್.!

ಹೀಗಾಗಿ ಸಮಸ್ಯೆ ಪರಿಹರಿಸಲು ಪಾಲಿಕೆ ಸರ್ಕಾರಿ ಕಟ್ಟಡಗಳಿಗೆ ಒಟಿಎಸ್ ಯೋಜನೆಯನ್ನು ಜಾರಿಗಾಳಿಸಿದೆ. ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗೆ OTS ಅನ್ನು ನೀಡಲಾಗಿದ್ದು, ಯೋಜನೆ ದು ಮಾರ್ಚ್ 31 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಲಭ್ಯವಿರಲಿದೆ ಎಂದು ತಿಳಿಸಲಾಗಿದೆ.

error: Content is protected !!
Scroll to Top