ಮೆಟ್ರೋ ರೈಲು ದರ ಪರಿಷ್ಕರಣೆ ರಾಜ್ಯ ಸರ್ಕಾರದ ಕೈಯಲ್ಲಿಲ್ಲ: ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಮಾ. 18 ಬೆಂಗಳೂರು: ಮೆಟ್ರೋ ರೈಲು ದರ ಪರಿಷ್ಕರಣೆ ರಾಜ್ಯ ಸರ್ಕಾರದ ಕೈಯಲ್ಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ, ಮೆಟ್ರೋ ರೈಲು ದರ ಪರಿಷ್ಕರಣೆ ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ದರ ನಿಗದಿ ಸಮಿತಿ ಒಮ್ಮೆ ಶಿಫಾರಸ್ಸು ಮಾಡಿದರೆ ದರ ಇಳಿಕೆ ಸಾಧ್ಯವಿಲ್ಲ. ಪ್ರಯಾಣ ದರವನ್ನು ಸಮಿತಿಯೆ ನಿರ್ಧರಿಸುತ್ತದೆ. ಆದರೆ, ಬಿಜೆಪಿ ಕೇಂದ್ರ ಸರ್ಕಾರದ ಬಳಿ ಧ್ವನಿ ಎತ್ತುವ ಪ್ರಯತ್ನ ಮಾಡಿದರೆ, ದರ ಏರಿಕೆಯನ್ನು ಪರಿಷ್ಕರಿಸಬಹುದು ಎಂದು ಹೇಳಿದರು.

2002 ರ ಮೆಟ್ರೋ ರೈಲುಗಳು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆಯ ಸೆಕ್ಷನ್ 34(1) ರ ಸೆಕ್ಷನ್ 34(1) ರ ಪ್ರಕಾರ, ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಮೆಟ್ರೋ ರೈಲು ಪ್ರಯಾಣಿಕರ ದರಗಳನ್ನು ಶಿಫಾರಸು ಮಾಡಲು ಶುಲ್ಕ ನಿಗದಿ ಸಮಿತಿಯನ್ನು ರಚಿಸಬಹುದು. ಹೈಕೋರ್ಟ್‌ನ ಸಿಜೆ ಅವರೊಂದಿಗೆ ಸಮಾಲೋಚಿಸಿ ಸಮಿತಿಯ ಮುಖ್ಯಸ್ಥರಾಗಿ ಹಾಲಿ ನ್ಯಾಯಾಧೀಶರನ್ನು ನೇಮಿಸಲಾಗುತ್ತದೆ.

Also Read  ಉದ್ವಿಗ್ನಗೊಂಡ ಪೌರತ್ವದ ಬಿಸಿ ➤ ಮಂಗಳೂರು ಕಮಿಷನರ್ ಡಾ‌| ಹರ್ಷರವರಿಂದ ಪತ್ರಿಕಾಗೋಷ್ಠಿ

2022 ರಲ್ಲಿ, ಬಿಜೆಪಿ ಅಧಿಕಾರದಲ್ಲಿದ್ದಾಗ, ದರ ಪರಿಷ್ಕರಣೆ ಪ್ರಕ್ರಿಯೆಯನ್ನು ಸೆಪ್ಟೆಂಬರ್ 7, 2024 ರಲ್ಲಿ ಕೇಂದ್ರದ ಇಬ್ಬರು ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವುದರೊಂದಿಗೆ ಪ್ರಾರಂಭಿಸಿತ್ತು. ಈ ಸಮತಿಯು ಅಕ್ಟೋಬರ್ 16, 2024 ರಂದು ತನ್ನ ವರದಿಯನ್ನು ನೀಡಿದ್ದು, ಫೆಬ್ರವರಿ 9, 2025 ರಂದು ದರಗಳನ್ನು ಪರಿಷ್ಕರಿಸಲು ಆದೇಶವನ್ನು ಅಂಗೀಕರಿಸಲಾಗಿದೆ ಎಂದು ವಿವರಿಸಿದರು.

error: Content is protected !!
Scroll to Top