ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಎಷ್ಟಿದೆ?

(ನ್ಯೂಸ್ ಕಡಬ) newskadaba.com ಮಾ. 18: ಬೆಂಗಳೂರು: ಚಿನ್ನದ ದರ ದಲ್ಲಿ ಇಂದು ಮತ್ತೆ ಏರಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಮತ್ತೆ ತಲೆನೋವು ಹೆಚ್ಚಾಗುವಂತಾಗಿದೆ. ಮಂಗಳವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 40ರೂ. ಏರಿಕೆ ಆಗಿ 8,250 ರೂ. ತಲುಪಿದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 44ರೂ. ಏರಿಕೆಯಾಗಿ 9,000 ರೂ.ಗೆ ತಲುಪಿದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನ 66,000 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 82,500 ರೂ. ಮತ್ತು 100 ಗ್ರಾಂಗೆ 8,25,000 ರೂ. ನೀಡಬೇಕಾಗುತ್ತದೆ. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ72,000 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 90,000 ರೂ. ಮತ್ತು 100 ಗ್ರಾಂಗೆ 9,00,000 ರೂ. ಪಾವತಿಸಬೇಕಾಗುತ್ತದೆ.

error: Content is protected !!
Scroll to Top