(ನ್ಯೂಸ್ ಕಡಬ) newskadaba.com ಮಾ. 18: ‘ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಸ್ಕೀಮ್’ ಆ್ಯಪ್ ಅನ್ನು ಇಂದು ಸಚಿವೆ ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಿದರು. ಕೈಗಾರಿಕೆಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗುತ್ತಿದೆ, AI, ರೊಬೊಟಿಕ್ಸ್ ಹಾಗೂ ಇತರ ಪ್ರಗತಿಗಳನ್ನು ಒಳಗೊಂಡಿವೆ ಎಂದಿರುವ ನಿರ್ಮಲಾ ಸೀತಾರಾಮನ್ ಪ್ರಧಾನ ಮಂತ್ರಿ ಮೋದಿಯವರ ದೂರದೃಷ್ಟಿಯ ವಿಧಾನವನ್ನು ಶ್ಲಾಘಿಸಿದರು.

‘ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ಸ್ಕೀಮ್ ಆ್ಯಪ್’ ಬಿಡುಗಡೆ ಸಂದರ್ಭದಲ್ಲಿ ಉದ್ಯೋಗ ದಾಖಲಾತಿಗಳನ್ನು ಹೆಚ್ಚಿಸಲು,
ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರಿಗೆ ಬೆಂಬಲ ನೀಡಲು ಐದು ವಿಭಿನ್ನ ಯೋಜನೆಗಳನ್ನು ಘೋಷಿಸಲಾಗಿದೆ ಎಂದರು.