ಮಾರ್ಚ್ ನಲ್ಲಿ 2 ದಿನ ರಾಷ್ಟ್ರಾದ್ಯಂತ ಬ್ಯಾಂಕ್ ಮುಷ್ಕರ

(ನ್ಯೂಸ್ ಕಡಬ) newskadaba.com ಮಾ. 14 :ನವದೆಹಲಿ: ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಜೊತೆ ಪ್ರಮುಖ ಬೇಡಿಕೆಗಳ ಕುರಿತು ನಡೆದ ಚರ್ಚೆಗಳು ಯಾವುದೇ ಸಕಾರಾತ್ಮಕ ಫಲಿತಾಂಶವನ್ನು ನೀಡದ ಕಾರಣ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಯುಎಫ್ ಬಿಯು ನಿರ್ಧರಿಸಿದೆ.

ಐಬಿಎ ಜೊತೆಗಿನ ಸಭೆಯಲ್ಲಿ, ಎಲ್ಲಾ ಯುಎಫ್‌ಬಿಯು ಘಟಕಗಳು ಎಲ್ಲಾ ಕೇಡರ್‌ಗಳಲ್ಲಿ ನೇಮಕಾತಿ ಮತ್ತು ಐದು ದಿನಗಳ ಕೆಲಸದ ವಾರ ಸೇರಿದಂತೆ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿತ್ತು.

ಆದರೂ, ಪ್ರಮುಖ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ ಎಂದು ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್‌ಸಿಬಿಇ) ಪ್ರಧಾನ ಕಾರ್ಯದರ್ಶಿ ಎಲ್ ಚಂದ್ರಶೇಖರ್ ಹೇಳಿದರು.

error: Content is protected !!
Scroll to Top