ಹಿರಿಯರ ಕ್ರೀಡಾಕೂಟ: ಎಂ.ಎಸ್.ವಸಂತಿ ಮೆದು ರಾಷ್ಟ್ರಮಟ್ಟಕ್ಕೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.30. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಿ.ಚನ್ನಬೈರೇ ಗೌಡ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಶನ್ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಸವಣೂರಿನ ವಸಂತಿ ಶಿವರಾಮ ಮೆದು ಅವರು ಬಹುಮಾನ ಪಡೆದುಕೊಂಡು ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರು 1500 ಮೀ ಓಟದಲ್ಲಿ ಪ್ರಥಮ, 800 ಮೀ. ಓಟದಲ್ಲಿ ದ್ವಿತೀಯ ಶಾಟ್‍ಪುಟ್‍ನಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡು ಮಂಗಳೂರಿನಲ್ಲಿ ಎ.13, 14 ,15 ರಂದು ನಡೆಯುವ ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಸವಣೂರಿನ ಮೆದು ಶಿವರಾಮ ಗೌಡರ ಪತ್ನಿ.

Also Read  ಮಹಿಳಾ ಟಿ 20: ಭಾರತಕ್ಕೆ ಜಯ

error: Content is protected !!
Scroll to Top