(ನ್ಯೂಸ್ ಕಡಬ) newskadaba.com ಮಾ. 14: ಆಸ್ಟ್ರೇಲಿಯಾದಲ್ಲಿ ಕೃತಕ ಹೃದಯ ಅಳವಡಿಸಿದ ವ್ಯಕ್ತಿಯೊಬ್ಬರು 100 ದಿನಗಳ ಕಾಲ ಆರೋಗ್ಯವಾಗಿ ಬದುಕುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಆಸ್ಟ್ರೇಲಿಯಾದ 40 ವರ್ಷದ ರೋಗಿಯೊಬ್ಬರು ಹೃದಯ ನೀಡುವಂತಹ ದಾನಿಗಾಗಿ ಕಾಯುತ್ತಿದ್ದರಿಂದ ವೈದ್ಯರು ಅವರಿಗೆ ಕೃತಕ ಟೈಟಾನಿಯಂ ಹೃದಯವನ್ನು ಅಳವಡಿಸಿದ್ದಾರೆ. ಅಚ್ಚರಿ ಎಂಬಂತೆ ಅವರು ನೂರು ದಿನಗಳ ಕಾಲ ಬದುಕಿದ್ದು, ಆ ಮೂಲಕ ಈ ತಂತ್ರಜ್ಞಾನದಿಂದ ದೀರ್ಘಕಾಲ ಬದುಕಿದ ವ್ಯಕ್ತಿ ಎಂದು ಎನಿಸಿಕೊಂಡಿದ್ದಾರೆ. ಹೃದಯ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿ ಪ್ರಸ್ತುತ ಇದೀಗ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.