(ನ್ಯೂಸ್ ಕಡಬ) newskadaba.com ಮಾ. 13: ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿ, ಭಾರತೀಯ ರೈಲ್ವೆಯು ಕುಂದಾಪುರ ರೈಲ್ವೇ ನಿಲ್ದಾಣದಲ್ಲಿ ದೆಹಲಿಗೆ ತೆರಳುವ ಎರಡು ರೈಲುಗಳಿಗೆ ಹೆಚ್ಚುವರಿ ನಿಲುಗಡೆಗೆ ಆದೇಶಿಸಿದೆ.


ರೈಲು ಸಂಖ್ಯೆ 22653/22654 ತಿರುವನಂತಪುರಂ ಸೆಂಟ್ರಲ್ – ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 22655/22656 ಎರ್ನಾಕುಲಂ – ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲುಗಳು ಕುಂದಾಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ನೀಡಲಿವೆ. ಈ ಹೆಚ್ಚುವರಿ ನಿಲುಗಡೆಯಿಂದ ಕುಂದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ದೆಹಲಿ ಮತ್ತು ಇತರ ಉತ್ತರ ಭಾರತದ ಭಾಗಗಳಿಗೆ ಪ್ರಯಾಣಿಸುವುದು ಸುಲಭವಾಗಲಿದೆ.