ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ‘ಗೃಹ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ’- ಸುರೇಶ್ ಬಾಬು

(ನ್ಯೂಸ್ ಕಡಬ) newskadaba.com ಮಾ. 13: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ರಾಜ್ಯ ಸರ್ಕಾರ , ರನ್ಯಾಗೆ ಕ್ಲೀನ್‌ಚಿಟ್ ಕೊಟ್ಟರೂ ಆಶ್ಚರ್ಯ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಹೇಳಿದ್ದಾರೆ.

ರನ್ಯಾ ರಾವ್ ಕೇಸ್ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂತಹ ಮಾಫಿಯಾಗಳು ಹೆಚ್ಚಾಗಿ ತಲೆ ಎತ್ತುತ್ತಿವೆ. ಗೃಹ ಇಲಾಖೆ ಸರಿಯಾಗಿ ಕೆಲಸ ಮಾಡ್ತಿಲ್ಲ. ದಕ್ಷ ಅಧಿಕಾರಿಗಳು ಇದ್ದರೂ ಸರ್ಕಾರ ಸರಿಯಾಗಿ ಬಳಕೆ ಮಾಡಿಕೊಳ್ತಿಲ್ಲ. ರನ್ಯಾ ರಾವ್ ಅನೇಕ ಬಾರಿ ದುಬೈಗೆ ಹೋಗಿ ಬಂದಿದ್ದಾರೆ. ತಂದೆ IPS ಅಧಿಕಾರಿ ಅಂತ ರನ್ಯಾಗೆ ರಕ್ಷಣೆ ಕೊಡ್ತಿದ್ದಾರಾ ಎಂದು ಹೇಳಿದರು.

Also Read  ಸ್ಮಶಾನದ ಬಾವಿಯಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆ …..!  

ಪೊಲೀಸರ ರಕ್ಷಣೆಯಲ್ಲಿ ರನ್ಯಾ ಓಡಾಡಿದ್ದಾಳೆ. ಸರ್ಕಾರಕ್ಕೆ ನಾಚಿಕೆ ಆಗಬೇಕು.14 ಕೆಜಿ ಚಿನ್ನ ಸಾಗಾಣೆ ಮಾಡ್ತಾರೆ ಅಂದರೆ ಗೃಹ ಇಲಾಖೆ ಇದರಲ್ಲಿ ಶಾಮೀಲಾಗಿದೆ ಅನ್ನಿಸುತ್ತೆ. ಸಿಐಡಿ ತನಿಖೆ ಯಾಕೆ ವಾಪಸ್ ಪಡೆದ್ರಿ? ಇದು ನಮಗೆ ಅನುಮಾನ ಬರ್ತಿದೆ. ರನ್ಯಾ ರಾವ್ ಉಳಿಸೋಕೆ ಸರ್ಕಾರ ಮುಂದಾಗ್ತಿರುವ ಅನುಮಾನ ಬರುತ್ತಿದೆ. ಎಂದು ತಿಳಿಸಿದರು. ಮುಡಾ ಕೇಸ್‌ನಲ್ಲಿ ಸೈಟ್ ವಾಪಸ್ ಕೊಟ್ಟಂತೆ ಚಿನ್ನವನ್ನ ದುಬೈಗೆ ವಾಪಸ್ ಇಟ್ಟು ಬಾ ಅಂತ ಹೇಳಿದ್ರೂ ಅಚ್ಚರಿಯಿಲ್ಲ ಎಂದು ವ್ಯಂಗ್ಯವಾಡಿದರು.

error: Content is protected !!