(ನ್ಯೂಸ್ ಕಡಬ) newskadaba.com ಮಾ. 13: ಮಣಿಪುರದ ತೆಂಗೌಪಾಲ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮ್ಯಾನ್ಮಾರ್ ಪ್ರಜಿಯನ್ನು ಬಂಧಿಸಿದ್ದು, ಆತನಿಂದ 4.4 ಕೆಜಿ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಂಡಿವೆ. ಹೌಲೆನ್ನೆಯಿಂದ ನ್ಯೂ ಶಿಜಾಂಗ್ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಮ್ಯಾನ್ಮಾರ್‌ನ ತಮು ನಿವಾಸಿ 32 ವರ್ಷದ ಹೆರಿ ಅವರನ್ನು ಭದ್ರತಾ ಪಡೆಗಳು ಬಂಧಿಸಿವೆ.


ಆತನಿಂದ ನಾಲ್ಕು ಪ್ಯಾಕೆಟ್ ಯಾಬಾ ಮಾತ್ರೆಗಳನ್ನು (ಅಂದಾಜು 4.4 ಕೆಜಿ ತೂಕ) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ರೇಜಿ ಡ್ರಗ್ ಎಂದೂ ಕರೆಯಲ್ಪಡುವ ಮೆಥಾಂಫೆಟಮೈನ್ ಮತ್ತು ಕೆಫೀನ್ ಮಿಶ್ರಣವನ್ನು ಹೊಂದಿರುವ ಯಾಬಾ ಮಾತ್ರೆಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.