ಉಡುಪಿ: ಗರುಡ ಗ್ಯಾಂಗ್ ನ ನಟೋರಿಯಸ್ ಕ್ರಿಮಿನಲ್ ಇಸಾಕ್ ಕಾಲಿಗೆ ಗುಂಡು; ಬಂಧನ

(ನ್ಯೂಸ್ ಕಡಬ) newskadaba.com ಮಾ. 13: ಗರುಡ ಗ್ಯಾಂಗ್ ನಟೋರಿಯಸ್ ಕ್ರಿಮಿನಲ್ ಇಸಾಕ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಉಡುಪಿಯ ಹಿರಿಯಡ್ಕದಲ್ಲಿ ನಡೆದಿದೆ.

ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಲು ಯತ್ನಿಸಿದ ಇಸಾಕ್ ಮೇಲೆ ಮಣಿಪಾಲ ಪೊಲೀಸ್ ದೇವರಾಜ್ ಮತ್ತು ತಂಡ ಶೂಟ್ ಔಟ್ ಮಾಡಿದೆ. ಶೂಟ್ ಔಟ್ ಮಾಡಿದ ಬಳಿಕ ಪೊಲೀಸರು ಇಸಾಕ್ ನನ್ನ ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಾ. 4 ರಂದು ಬಂಧಿಸಲು ಬಂದ ಪೊಲೀಸರಿಗೆ ಇಸಾಕ್ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಈತ ನಟೋರಿಯಸ್ ಗರುಡ ಗ್ಯಾಂಗ್ ನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದು, ದರೋಡೆ ಪ್ರಕರಣವೊಂದಕ್ಕೆ ಸಂಬಂಧಿಸಿ ಇಸಾಕ್ ಗಾಗಿ ನೆಲಮಂಗಲ ಪೊಲೀಸರು ಶೋಧ ನಡೆಸುತ್ತಿದ್ದರು. ಇಸಾಕ್ ನನ್ನು ಬಂಧಿಸಲು ಪೊಲೀಸರು ಮಣಿಪಾಲದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಇಸಾಕ್ ತನ್ನ ಜೀಪ್ ನಲ್ಲಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಆತ ಮಣಿಪಾಲದ ಮಣ್ಣಪಳ್ಳದ ನಿರ್ಜನ ಪ್ರದೇಶದಲ್ಲಿ ಜೀಪ್ ನಿಲ್ಲಿಸಿ ಎಸ್ಕೇಪ್ ಆಗಿದ್ದ.

Also Read  ಕಡಬ: ಮತಾಂತರ ಕಾಯ್ದೆ ನಿಷೇಧಿಸಿ ಸಂಯುಕ್ತ ಕ್ರೈಸ್ತ ಎಕ್ಯುಮೆನಿಕಲ್‌ ಸಂಘಟನೆಯಿಂದ ತಹಶಿಲ್ದಾರ್ ಮೂಲಕ ಸಿಎಂ ಗೆ ಮನವಿ

ಆದರೆ ಇದೀಗ 8 ದಿನಗಳ ಬಳಿಕ ಪೊಲೀಸರು ಇಸಾಕ್ ನನ್ನ ಪತ್ತೆ ಮಾಡಿದ್ದಾರೆ. ಈತನನ್ನು ಪೊಲೀಸರು ಬಂಧಿಸಲು ಪ್ರಯತ್ನಿಸಿದಾಗ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಲೀಸರು ಇಸಾಕ್ ಕಾಲಿಗೆ ಶೂಟ್ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ.

error: Content is protected !!
Scroll to Top