(ನ್ಯೂಸ್ ಕಡಬ) newskadaba.com ಮಾ. 12 ಥಾಣೆ: ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಸರ್ಕಾರಿ ಸ್ವಾಮ್ಯದ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಇಬ್ಬರು ಉದ್ಯೋಗಿಗಳನ್ನು ಲಂಚ ಪಡೆದ ಆರೋಪದ ಮೇಲೆ ಬಂಧಿಸಿದೆ.


ಎಸಿಬಿಯ ಥಾಣೆ ಘಟಕಕ್ಕೆ ದೂರು ನೀಡಿದ ನಂತರ ನಡೆದ ಕಾರ್ಯಾಚರಣೆಯಲ್ಲಿ ಕಛೇರಿಯ ಹಿರಿಯ ಗುಮಾಸ್ತ ಹರೀಶ್ ಮರಾಠ (47) ಮತ್ತು ಕಿರಿಯ ಗುಮಾಸ್ತ ಹೇಮಂತ್ ಕಿರ್ಪಣ್ (39) ಅವರನ್ನು ಬಂಧಿಸಲಾಗಿದೆ