ಪಂಜಾಬ್‌ನಲ್ಲಿ ಮಾದಕ ವಸ್ತುಗಳ ಕಿಂಗ್‌ಪಿನ್ ಬಂಧನ

(ನ್ಯೂಸ್ ಕಡಬ) newskadaba.com ಮಾ. 10 ಬೆಂಗಳೂರು: ಜಾಗತಿಕ ಮಾದಕ ವಸ್ತುಗಳ  ಜಾಲದಲ್ಲಿ ಪಾತ್ರವಹಿಸಿದ್ದಕ್ಕಾಗಿ ಎಫ್ ಬಿಐ ಗೆ ಬೇಕಾಗಿದ್ದ ಅಂತರಾಷ್ಟೀಯ ಮಾದಕವಸ್ತು ಕಳ್ಳಸಾಗಣೆದಾರ ಶಾನ್ ಭಿಂದರ್ ಅಲಿಯಾಸ್‌ ಶೆಹನಾಜ್ ಸಿಂಗ್‌ನನ್ನು  ಪೊಲೀಸರು ಬಂಧಿಸಿದ್ದಾರೆ. ಸಿಂಗ್ ಕೊಲಂಬಿಯಾದಿಂದ ಅಮೆರಿಕ ಮತ್ತು ಕೆನಡಾಕ್ಕೆ ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ ಮೋಸ್ಟ್‌ ವಾಂಟೆಡ್‌ ಡ್ರಗ್‌ ಫೆಡ್ಲರ್‌ ಆಗಿದ್ದ.

ಫೆಬ್ರವರಿ 26 ರಂದು ಯುಎಸ್‌ನಲ್ಲಿ ನಡೆದ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಆತನ ಬಂಧನವಾಗಿದೆ, ಅಲ್ಲಿ ಅವರ ನಾಲ್ವರು ಸಹಚರರಾದ ಅಮೃತಪಾಲ್ ಸಿಂಗ್ ಅಲಿಯಾಸ್ ಅಮೃತ್, ಅಮೃತಪಾಲ್ ಸಿಂಗ್ ಅಲಿಯಾಸ್ ಚೀಮಾ, ತಕ್ದಿರ್ ಸಿಂಗ್ ಅಲಿಯಾಸ್ ರೋಮಿ, ಸರ್ಬ್ಸಿತ್ ಸಿಂಗ್ ಅಲಿಯಾಸ್ ಸಾಬಿ ಮತ್ತು ಫೆರ್ನಾಂಡೋ ವಲ್ಲದರೆಸ್ ಅಲಿಯಾಸ್ ಫ್ರಾಂಕೋ ಅವರನ್ನು ಬಂಧಿಸಲಾಯಿತು.

error: Content is protected !!
Scroll to Top